ಭಟ್ಕಳ, ಜನವರಿ 15:ಮೊರಾರ್ಜಿ ಶಾಲೆಯ ವಸತಿ ಶಾಲೆ ನಿರ್ವಹಣೆಗಾಗಿ 250 ಸಂಖ್ಯಾ ಬಲದ ವಿದ್ಯಾರ್ಥಿಗಳಿಗೆ ವಸತಿ ಹಾಗೂ ಶಾಲೆಗೆ ಭಟ್ಕಳ ತಾಲೂಕಿನಲ್ಲಿ ಬಾಡಿಗೆ ಕಟ್ಟಡದ ಅಗತ್ಯವಿರುತ್ತದೆ. ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ಬಾಡಿಗೆ ದರದಲ್ಲಿ ಕಟ್ಟಡ ನೀಡಲು ಆಸಕ್ತರಿರುವ ಕಟ್ಟಡ ಮಾಲಕರು ತಾಲೂಕು ಪಂಚಾಯತ ಕಾರ್ಯಾಲಯವನ್ನು ಸಂಪಕಿಸುವಂತೆ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.