ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಳ್ತಂಗಡಿ: ಆರೋಪ ಪ್ರತ್ಯಾರೋಪ ನಿಲ್ಲಿಸಿ - ಸಂತ್ರಸ್ತರಿಗೆ ಸಹಾಯಹಸ್ತ ನೀಡಿ - ಮಾರುತಿ ಮಾನ್ಪಡೆ

ಬೆಳ್ತಂಗಡಿ: ಆರೋಪ ಪ್ರತ್ಯಾರೋಪ ನಿಲ್ಲಿಸಿ - ಸಂತ್ರಸ್ತರಿಗೆ ಸಹಾಯಹಸ್ತ ನೀಡಿ - ಮಾರುತಿ ಮಾನ್ಪಡೆ

Mon, 05 Oct 2009 03:14:00  Office Staff   S.O. News Service

ಬೆಳ್ತಂಗಡಿ, ಅ.4: ರಾಜ್ಯ ಹಾಗೂ ಕೇಂದ್ರ ಸರಕಾರಗಳು ನಡೆಸುತ್ತಿರುವ ಆರೋಪ ಪ್ರತ್ಯಾರೋಪಗಳನ್ನು ನಿಲ್ಲಿಸಿ ಮಳೆಯಿಂದ ತತ್ತರಿಸಿ ಹೋಗಿರುವ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗಬೇಕು ಎಂದು ಸಿಪಿ‌ಎಂ ರಾಜ್ಯ ಸಮಿತಿ ಸದಸ್ಯ ಮಾರುತಿ ಮಾನ್ಪಡೆ ಹೇಳಿದ್ದಾರೆ. 

ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡುತ್ತಿದ್ದ ಅವರು, ಒಂದು ವಾರಗಳ ಕಾಲ ರಾಜ್ಯ ಸರಕಾರ ನಿಷ್ಕ್ರಿಯವಾಗಿತ್ತು. ದಸರಾ, ಬೈಠಕ್ ಮೂಡಿನಲ್ಲಿದ್ದ ಸಚಿವರುಗಳಿಗೆ ಜನ ನೆರೆಹಾವಳಿಗೆ ಸಿಲುಕಿದಾಗ ಸ್ಪಂದಿಸಲು ಸಮಯವಿರಲಿಲ್ಲ. 

ಅತಿವೃಷ್ಟಿಯ ಬಗ್ಗೆ ಮುನ್ಸೂಚನೆಗ ಳಿದ್ದರೂ ಯಾವುದೇ ಮುಂಜಾಗರೂಕತಾ ಕ್ರಮ ಕೈಗೊಳ್ಳುವಲ್ಲಿ ಸರಕಾರ ವಿಫಲವಾಯಿತು. ಸರಕಾರದ ಬೇಜಬ್ದಾರಿಯಿಂದ ವಿಪತ್ತು ಈ ರೀತಿ ಹೆಚ್ಚಾಗಲು ಕಾರಣವಾಯಿತು ಎಂದು ತಿಳಿಸಿದರು. 

ನೆರೆ ಪರಿಹಾರಕ್ಕೆ ಆಗ್ರಹ: ಪ್ರಾಥಮಿಕ ವರದಿಗಳಂತೆ ರಾಜ್ಯದಲ್ಲಿ 20 ಸಾವಿರ ಕೋಟಿ ರೂ.ನಷ್ಟ ಸಂಭವಿಸಿದೆ. ಕೃಷಿಕರಿಗೆ ಮನೆ ಕಳೆದು ಕೊಂಡವರಿಗೆ ಅಗತ್ಯ ಪರಿಹಾರ ಒದಗಿಸಬೇಕು. ಮನೆ ಕಳೆದುಕೊಂಡ ವರಿಗೆ ಕನಿಷ್ಠ ಒಂದು ಲಕ್ಷ ರೂ.ವಾದರೂ ಪರಿಹಾರ ಒದಗಿಸಿ ಉತ್ತಮ ಮನೆಗಳನ್ನು ನಿರ್ಮಿಸಲು ಅವಕಾಶ ಒದಗಿಸಬೇಕು ಎಂದು ಆಗ್ರಹಿಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಕನಿಷ್ಠ 25 ಕೆ.ಜಿ. ಅಕ್ಕಿ ಹಾಗೂ ಸೀಮೆ ಎಣ್ಣೆ ಒದಗಿಸಬೇಕು ಎಂದು ಮಾನ್ಪಡೆ ಒತ್ತಾಯಿಸಿದರು. 

ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಹೆಚ್ಚಿಸಲಿ

ಉದ್ಯೋಗ ಖಾತರಿ ಯೋಜನೆ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾ ವಾಗುತ್ತಿಲ್ಲ ಎಂದು ಆರೋಪಿಸಿದ ಮಾನ್ಪಡೆ, ರಾಜ್ಯ ಸರಕಾರ ಯೋಜನೆ ಯನ್ನು ದುರುಪಯೋಗ ಮಾಡುತ್ತಿದೆ. ಸರಕಾರ ಕನಿಷ್ಠ ಕೂಲಿಯನ್ನು 84ರೂ.ನಿಂದ ಹೆಚ್ಚಿಸಿಲ್ಲ. ಅದನ್ನು ಈಗ 119ರೂ.ಗಳಿಗೆ ಹೆಚ್ಚಿಸಬೇಕು ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಸಿಪಿ‌ಎಂ ಮುಖಂಡ ಹರಿದಾಸ್, ಶೇಖರ ಎಲ್. ಉಪಸ್ಥಿತರಿದ್ದರು. 
 

ಬಾಬಾಬುಡಾನ್‌ಗಿರಿ: ಗುಹೆಯ    ಮೂಲ ಸ್ವರೂಪ ಬದಲಿಸುವ ಯತ್ನ - ಬಾಬಾಬುಡಾನ್‌ಗಿರಿಯ ದುರಸ್ತಿಯ ಹೆಸರಿನಲ್ಲಿ ಗುಹೆಯ ಮೂಲ ಸ್ವರೂಪಗಳನ್ನು ಬದಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಗುಹೆಯ ದುರಸ್ತಿ ಕಾರ್ಯ ಮಾಡುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಮಾರುತಿ ಮಾನ್ಪಡೆ ಹೇಳಿದರು.


Share: