ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಷ್ಟ್ರಪತಿ ಚುನಾವಣೆ: ಶೇ.98.9 ಮತದಾನ

ರಾಷ್ಟ್ರಪತಿ ಚುನಾವಣೆ: ಶೇ.98.9 ಮತದಾನ

Wed, 20 Jul 2022 03:51:37  Office Staff   Vb

ಹೊಸದಿಲ್ಲಿ: ಸಂಸತ್‌ ಭವನದಲ್ಲಿ ಮತದಾನಕ್ಕೆ ಅನುಮತಿ ಪಡೆದಿದ್ದ ಶೇ.98.9ರಷ್ಟು ಮತದಾರರು ಸೋಮವಾರ ತಮ್ಮ ಹಕ್ಕನ್ನು ಚಲಾಯಿಸುವುದರೊಂದಿಗೆ ರಾಷ್ಟ್ರಪತಿ ಚುನಾವಣೆಯ ಮತದಾನವು ಮುಕ್ತಾಯಗೊಂಡಿದೆ ಎಂದು ಚುನಾವಣಾಧಿಕಾರಿ ಪಿ.ಸಿ. ಮೋದಿ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಸಂಸತ್ ಭವನದಲ್ಲಿ ಮತ ಚಲಾಯಿಸಿದರು. ದೇಶಾದ್ಯಂತ ರಾಜ್ಯ ವಿಧಾನಸಭೆಗಳಲ್ಲಿಯೂ ಮತದಾನ ನಡೆಯಿತು.

ವಿವಿಧ ಪಕ್ಷಗಳು ತಳೆದಿರುವ ನಿಲುವುಗಳನ್ನು ಪರಿಗಣಿಸಿದರೆ ಎನ್‌ಡಿಎ ಅಭ್ಯರ್ಥಿ ಬ್ರೌಪದಿ ಮುರ್ಮು ಅವರು ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿ ಯಶವಂತ ಸಿನ್ಹಾ ಅವರ ವಿರುದ್ದ ಜಯಭೇರಿ ಮೊಳಗಿಸಲು ಸಜ್ಜಾಗಿದ್ದಾರೆ.

ಮತದಾನದ ಬಳಿಕ ಸುದ್ದಿಗಾರರಿಗೆ ವಿವರಗಳನ್ನು ನೀಡಿದ ಚುನಾವಣಾಧಿಕಾರಿ ಮೋದಿ,727 ಸಂಸದರು ಮತ್ತು ಒಂಭತ್ತು ಶಾಸಕರು ಸೇರಿದಂತೆ ಚುನಾವಣಾ ಆಯೋಗದಿಂದ ಅನುಮತಿಸಲ್ಪಟ್ಟ 736 ಮತದಾರರ ಪೈಕಿ 728 ಮತದಾರರು (719 ಸಂಸದರು ಮತ್ತು ಒಂಭತ್ತು ಶಾಸಕರು) ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ತಿಳಿಸಿದರು. ಮತಗಳ ಎಣಿಕೆ ಜು.21ರಂದು ನಡೆಯಲಿದೆ.


Share: