ಮಂಗಳೂರು: ಐಎಂವಿ 1989 ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಿಕ್ಷಾ ಚಾಲಕರು ಮೇ 6ರಂದು ‘ಪಾರ್ಲಿಮೆಂಟ್ ಚಲೋ’ ಮಾಡಲಿದ್ದಾರೆ ಎಂದು ದ.ಕ.ಜಿಲ್ಲಾ ಆಟೋ ರಿಕ್ಷಾ ಡ್ರೈವರಸ್ ಯೂನಿಯನ್ ತಿಳಿಸಿದೆ.
ವಾಹನ ಚಾಲನೆ ಸಂದರ್ಭ ಅಪಘಾತಕ್ಕೀಡಾಗಿ ಪ್ರಯಾಣಿಕರು ದುರ್ಮರಣ ಹೊಂದಿದರೆ ಈ ಹಿಂದೆ ಐಪಿಸಿ ಸೆ.304ಎ ಅನ್ವಯ ಚಾಲಕನಿಗೆ ಜಾಮೀನು ಸಿಗುತ್ತಿತ್ತು. ಆದರೆ, ಇದೀಗ ಚಾಲಕನಿಗೆ 6 ತಿಂಗಳಿನಿಂದ 1 ವರ್ಷಗಳ ಕಾಲ ಜಾಮೀನು ಸಿಗದೆ ಜೈಲಿಗೆ ತಳ್ಳುವ ಕಾನೂನು ಸಷ್ಟಿಸಲು ಹೊರಟಿರುವುದು ಖಂಡನೀಯ. ಇದರ ವಿರುದ್ಧ ರಿಕ್ಷಾ ಚಾಲಕರು ಹೋರಾಟ ಮಾಡುವುದು ಅನಿವಾರ್ಯ ಎಂದು ಯೂನಿಯನ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಟಿ.ಸುವರ್ಣ ತಿಳಿಸಿದ್ದಾರೆ. ದಿಲ್ಲಿಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಿಕ್ಷಾ ಚಾಲಕರು ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಕರೆ ನೀಡಿದ್ದಾರೆ.