ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಜ್ಯ ಶ್ರೇಷ್ಠ ರಫ್ತುಗಳ ಪ್ರಧಾನ ಸಮಾರಂಭ. ರಾಘವೇಂದ್ರ ಪಿ ಶಾಸ್ತ್ರಿ ಅವರಿಗೆ ಪ್ರಶಸ್ತಿ

ರಾಜ್ಯ ಶ್ರೇಷ್ಠ ರಫ್ತುಗಳ ಪ್ರಧಾನ ಸಮಾರಂಭ. ರಾಘವೇಂದ್ರ ಪಿ ಶಾಸ್ತ್ರಿ ಅವರಿಗೆ ಪ್ರಶಸ್ತಿ

Tue, 25 Jul 2023 15:50:16  Office Staff   SO News

ಕಾರವಾರ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ರಾಜ್ಯ ಶ್ರೇಷ್ಠ ರಫ್ತುಗಳ ಪ್ರಧಾನ ಸಮಾರಂಭ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಿತು.

ಪ್ರಶಸ್ತಿ ಸಮಾರಂಭದಲ್ಲಿ ಜಿಲ್ಲಾ ವಿಭಾಗದಿಂದ ಉತ್ತರ ಕನ್ನಡ ಜಿಲ್ಲೆಯ ಗ್ರೀನ್ ವ್ಯಾಲಿ ಆರ್ಗಾನಿಕ್ಸ್ ಸ್ಪೈಸಸ್ ನ ಪಾಲುದಾರರಾದ ರಾಘವೇಂದ್ರ ಪಿ ಶಾಸ್ತ್ರಿ ರವರಿಗೆ ಉತ್ತಮ ಗುಣಮಟ್ಟದ ಮಸಾಲೆಗಳ  ರಫ್ತು ಉತ್ಪನ್ನ ವಿಭಾಗಕ್ಕೆ  ಪ್ರಶಸ್ತಿ ನೀಡಲಾಯಿತು.
 ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಇನ್ನಿತರ ಸಚಿವ ಸಂಪುಟದ ಸದಸ್ಯರು ಹಾಗೂ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸದರಿ ಗ್ರೀನ್ ವ್ಯಾಲಿ ಆರ್ಗಾನಿಕ್ಸ್ ಸ್ಪೈಸಸ್, ಕಂಪನಿಯು ಜಿಲ್ಲೆಯಲ್ಲಿ 2008 ರಲ್ಲಿ ಸಂಘಟಿತವಾದ ಕಂಪನಿಯಾಗಿದ್ದು, ಈ ಸಂಸ್ಥೆಯು ಸ್ಥಳೀಯ ರೈತರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾವಯವವಾಗಿ ಬೆಳೆದ ಉತ್ತಮ ಗುಣಮಟ್ಟದ ಮಸಾಲೆಗಳನ್ನು ಪಡೆದುಕೊಂಡು ವ್ಯಾಪಾರ ಮಾಡಿರುತ್ತಾರೆ.


Share: