ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿತ. ಘಟನೆಯಲ್ಲಿ ಸಿಲುಕಿದ ಸರ್ಕಾರಿ ಬಸ್.

ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿತ. ಘಟನೆಯಲ್ಲಿ ಸಿಲುಕಿದ ಸರ್ಕಾರಿ ಬಸ್.

Mon, 24 Jul 2023 05:11:45  Office Staff   SO News

ಕುಮಟಾ : ಬಾರೀ ಮಳೆಯಿಂದ ಶಿರಸಿ - ಕುಮಟಾ  ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ರಾಗಿಹೊಸಳ್ಳಿ ಸಮೀಪದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಸರ್ಕಾರಿ ಬಸ್ಸೊಂದು .
ಗುಡ್ಡ ಕುಸಿತದ ಮಣ್ಣಿನಲ್ಲಿ ಸಿಲುಕಿದೆ.

ಪರಿಣಾಮವಾಗಿ  ಬಸ್‌ನಲ್ಲಿದ್ದ ಪ್ರಯಾಣಿಕರು ಪರದಾಟ ಅನುಭವಿಸಬೇಕಾಯಿತು. ಘಟನೆಯಿಂದ  ಮಾರ್ಗದಲ್ಲಿ ಕೆಲ ಸಂಚಾರ ಸ್ಥಗಿತವಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ರಸ್ತೆಯಲ್ಲಿ ಬಿದ್ದ ಮರಗಳನ್ನ ತೆರವುಗೊಳಿಸಿದ್ದಾರೆ. ಬಳಿಕ ಪ್ರಯಾಣಿಕರಿಗೆ  ಬೇರೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.


Share: