ಮಂಗಳೂರು: ಸ್ವಜಾತಿ ಸಂಗಾತಿ ಜೊತೆ ಜಾಲಿರೌಂಡ್ ಹೊಡೆಯಲೆಂದು ನಗರಕ್ಕೆ ಬಂದಿದ್ದ ಮುಸ್ಲಿಂ ಯುವಕನೊಬ್ಬನ ಬಗ್ಗೆ ಹಿಂದೂ ಸಂಘಟನೆಗೆ ತಪ್ಪು ಮಾಹಿತಿ ರವಾನೆಯಾದ ಕಾರಣ ಯುವಕನ ಕಾರನ್ನು ತಡೆಹಿಡಿದು ಆತನ ಮೇಲೆ ಹಲ್ಲೆಗೆ ಮುಂದಾದ ಘಟನೆ ಕಳೆದ ಶುಕ್ರವಾರ ನಡೆದಿದೆ.
ಆದರೆ ಸಕಾಲದಲ್ಲಿ ಮುಸ್ಲಿಂ ಯುವಕ ತನ್ನ ಕಾರನ್ನು ತಡೆಹಿಡಿದ ಬಜರಂಗಿ ಯೋರ್ವನನ್ನು ಗುರುತಿಸಿ, ಆತನನ್ನು ತಬ್ಬಿ ಹಿಡಿದು ತನ್ನ ಜೊತೆ ಇರುವ ಯುವತಿ ತನ್ನದೇ ಜಾತಿಯವಳು, ತನ್ನ ಪ್ರೇಮಿಯೂ ಎಂದು ನಂಬಿಸಿದ ಕಾರಣ ಬೀಸುವ ದೊಣ್ಣೆ ಯಿಂದ ತಪ್ಪಿಸಿಕೊಂಡಂತಾಗಿದ್ದು ಮಾತ್ರವಲ್ಲದೆ ನಡೆಯುವ ಸಾಧ್ಯತೆ ಇದ್ದ ದೊಡ್ಡ ಕೋಮು ಗಲಭೆಯೊಂದು ತಪ್ಪಿದಂತಾಗಿದೆ.
ತೊಕ್ಕೊಟ್ಟು ಬಳಿಯ ನಿವಾಸಿ ಯುವಕನೊಬ್ಬ ತನ್ನದೇ ಸಮುದಾಯದ ಯುವತಿ ಯೊಬ್ಬಳನ್ನು ಪ್ರೀತಿಸುತ್ತಿದ್ದ. ಕಳೆದ ಶುಕ್ರವಾರ ಯುವತಿಯ ಮನೆಯಲ್ಲಿ ಯಾರೂ ಇಲ್ಲದ ಕಾರಣ ಆಕೆ ತನ್ನ ಪ್ರೇಮಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ಒಂದೆರಡು ಗಂಟೆ ನಗರದಲ್ಲಿ ಜಾಲಿರೌಂಡ್ ಹೊಡೆಯುವ ಇಚ್ಛೆ ವ್ಯಕ್ತಪಡಿಸಿದ್ದಳು. ಅದರಂತೆ ಅವರಿಬ್ಬರೂ ಕಾರಿನಲ್ಲಿ ನಗರಕ್ಕೆ ಬಂದಿದ್ದರು. ಬರುವ ಗಡಿಬಿಡಿಯಲ್ಲಿ ಯುವತಿ ಬುರ್ಖಾ ಧರಿಸಲು ಮರೆತಿ ದ್ದಳು. ಇದು ಸಂಶಯಕ್ಕೆ ಕಾರಣವಾಗಿತ್ತು. ಇವರನ್ನು ಕಂಡ ವ್ಯಕ್ತಿಯೊಬ್ಬರು ಮುಸ್ಲಿಂ ಯುವಕನ ಜೊತೆ ಹಿಂದು ಯುವತಿ ಕಾರಿನಲ್ಲಿ ಸಾಗುತ್ತಿದ್ದಾರೆಂಬ ಸುದ್ಧಿಯನ್ನು ಹಿಂದು ಸಂಘಟನೆಯ ಕಾರ್ಯಕರ್ತರಿಗೆ ತಿಳಿಸಿದ್ದರು. ಅದರಂತೆ ಹಿಂದೂ ಸಂಘಟ ನೆಯ ಕಾರ್ಯಕರ್ತರು ನಾಲ್ಕು ಬೈಕ್ನಲ್ಲಿ ಕಾರನ್ನು ಹಿಂಬಾಲಿಸಿದ್ದರು. ಇದರಿಂದ ಮತ್ತಷ್ಟು ಕಂಗಾಲಾದ ಮುಸ್ಲಿಂ ಯುವಕ ಕಾರನ್ನು ಮತ್ತಷ್ಟು ವೇಗವಾಗಿ ಓಡಿಸಿದ್ದ. ಇದು ಹಿಂದು ಸಂಘಟನೆಯ ಕಾರ್ಯಕರ್ತರ ಸಂಶಯಕ್ಕೆ ಕಾರಣವಾಗಿ ಅವರು ಪಾಂಡೇಶ್ವರ ಎಸ್.ಪಿ ಕಚೇರಿ ಮುಂಭಾಗ ದಲ್ಲಿ ಕಾರನ್ನು ತಡೆದು ನಿಲ್ಲಿಸಿದರು. ಈ ವೇಳೆ ಕೆಲಸ ಕೆಟ್ಟಿತು ಎಂದುಕೊಂಡ ಮುಸ್ಲಿಂ ಯುವಕ ಕಾರಿನಿಂದ ಇಳಿದು ಬೈಕಲ್ಲಿ ಬಂದಿದ್ದ ಹಿಂದು ಕಾರ್ಯಕರ್ತರಲ್ಲಿ ತನ್ನ ಪರಿಚಯ ಇದ್ದಾತನನ್ನು ತಬ್ಬಿ ಹಿಡಿದು ಕಾರಿನಲ್ಲಿ ಬಂದಿದ್ದ ಯುವತಿ ತನ್ನದೇ ಸಮುದಾಯದವಳೆಂದೂ ತಾವು ಸಿಟಿ ಸುತ್ತಲು ಬಂದಿರುವ ಬಗ್ಗೆ ತಿಳಿಸಿದರು. ಮುಸ್ಲಿಂ ಯುವಕನ ಬಗ್ಗೆ ಹಿಂದು ಕಾರ್ಯಕರ್ತನಿಗೆ ಪರಿಚಯವಿದ್ದ ಕಾರಣ ಹಲ್ಲೆ ನಡೆಸುವುದು ತಪ್ಪಿತು. ಒಂದು ವೇಳೆ ಆತನ ಪರಿಚಯ ಇಲ್ಲದೆ ಇರುತ್ತಿದ್ದರೂ ಯಾವುದೇ ವಿಚಾರಣೆ ನಡೆಸದೆ ಆತನ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇತ್ತು. ಹಾಗೇನಾದರೂ ನಡೆಯುತ್ತಿದ್ದರೆ ಹತ್ತಿರದ ನೆಹರೂ ಮೈದಾನದಲ್ಲಿ ಮುಸ್ಲಿಂ ಸಮಾವೇಶ ನಡೆಯುತ್ತಿದ್ದು ಅವರಿಗೂ ಈ ಸುದ್ಧಿ ಮುಟ್ಟಿ ದೊಡ್ಡ ಗಲಭೆಯೇ ನಡೆಯುತಿತ್ತು. ಆದರೆ ಸಕಾಲದ ಎಚ್ಚರಿಕೆ ಎಲ್ಲಾ ದುರ್ಘಟನೆಯನ್ನು ತಪ್ಪಿಸಿದೆ.