ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಯಲ್ಲಾಪುರದಲ್ಲಿ ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ. ಓರ್ವ ಸಾವು, ಮೂವರಿಗೆ ಗಾಯ.

ಯಲ್ಲಾಪುರದಲ್ಲಿ ಲಾರಿಗಳ ನಡುವೆ ಮುಖಾಮುಖಿ ಢಿಕ್ಕಿ. ಓರ್ವ ಸಾವು, ಮೂವರಿಗೆ ಗಾಯ.

Fri, 12 Aug 2022 04:15:05  Office Staff   SO News

ಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹಿಟ್ಟಿನಬೈಲ್ ಬಳಿ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಕಿ  ಓರ್ವ ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಲಾರಿ ಚಾಲಕ ಮಹಾರಾಷ್ಟ್ರ ಮೂಲದ ಪರಮೇಶ್ವರ ಲಕ್ಷ್ಮಣ ದಖಲವಾಡ (25) ಮೃತ ದುರ್ದೈವಿ  ಎಂದು ಗುರುತಿಸಲಾಗಿದೆ. 

ಮಧ್ಯಪ್ರದೇಶದ ಜಸ್ಪಾಲ್ ಕೆಸಾರ್ ಸಿಂಗ್, ದಿಲೀಪ್ ಮಾರುತಿ ಯವನೆ ಹಾಗೂ ಮಹಾರಾಷ್ಟ್ರದ ರಾಜು ಬಾಬುರಾವ್ ಎಳ್ಳೆ ಗಾಯಗೊಂಡಿದ್ದು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳ್ಳಿ ಕಡೆಯಿಂದ ಯಲ್ಲಾಪುರದತ್ತ ಬರುತ್ತಿದ್ದ ಲಾರಿಯ ಚಾಲಕ ರಾಜು ಎಳ್ಳೆ ಹೆದ್ದಾರಿಯಲ್ಲಿನ ಹೊಂಡ ತಪ್ಪಿಸಲು ಹೋದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಎರಡೂ ಲಾರಿಗಳು ರಸ್ತೆಯ ಪಕ್ಕಕ್ಕೆ ಸರಿದು ಹೋಗಿ ಜಖಂಗೊಂಡಿದೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: