ಯಲ್ಲಾಪುರ : ಬ್ಯಾಂಕ್ ಆಪ್ ಬರೋಡಾ ಶಾಖಾ ಅಸಿಸ್ಟೆಂಟ್ ಮ್ಯಾನೇಜರ್ ಬ್ಯಾಂಕಿನ ಸುಮಾರು 2.69 ಕೋಟಿ ರೂ. ಲಪಟಾಯಿಸಿದ ಘಟನೆ ನಡೆದಿದೆ.
ಆಂದ್ರಪ್ರದೇಶದ ಅನಂತಪುರದ ಕುಮಾರ್ ಬೊನಾಲ್ ಹಣ ಲಪಟಾಯಿಸಿದ ಅಸಾಮಿ. ಕಳೆದ ಐದು ತಿಂಗಳಿಂದ ಕುಮಾರ್ ಬ್ಯಾಂಕ್ ಸಿಬ್ಬಂದಿಗಳ ಲಾಗಿನ್ ಬಳಸಿ ಹಣವನ್ನ ತನ್ನ ಪತ್ನಿ ಖಾತೆಗೆ ವರ್ಗಾಯಿಸಿಕೊಂಡಿದ್ದ. ಈಗ ಬ್ಯಾಂಕ್ ಕೆಲಸಕ್ಕೆ ಬಾರದೇ ನಾಪತ್ತೆಯಾಗಿರೋದನ್ನ ಗಮನಿಸಿದ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆಯಾದ ಬ್ಯಾಂಕ್ ಮ್ಯಾನೇಜರ್ ಕುಮಾರ್ ಬೊನಾಲ್ ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.