ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಯಲ್ಲಾಪುರ : ಬ್ಯಾಂಕ್ ಹಣ ಲಪಟಾಯಿಸಿ ಪರಾರಿಯಾಗಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಬಂಧನ.

ಯಲ್ಲಾಪುರ : ಬ್ಯಾಂಕ್ ಹಣ ಲಪಟಾಯಿಸಿ ಪರಾರಿಯಾಗಿದ್ದ ಅಸಿಸ್ಟೆಂಟ್ ಮ್ಯಾನೇಜರ್ ಬಂಧನ.

Tue, 20 Sep 2022 18:05:45  Office Staff   SO News

ಯಲ್ಲಾಪುರ : ಪಟ್ಟಣದಲ್ಲಿರುವ ಬ್ಯಾಂಕ್ ಆಪ್ ಬರೋಡಾ ಶಾಖೆಯಿಂದ ಕೋಟ್ಯಾಂತರ ರೂಪಾಯಿ ಹಣ ಲಪಟಾಯಿಸಿ ಪರಾರಿಯಾಗಿದ್ದ ಅಸಿಸ್ಟೆಂಟ್ ಮ್ಯಾನೇಜರ್ ನನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂದ್ರಪ್ರದೇಶ ಮೂಲದ ಕುಮಾರ್ ಬೋನಾಲ್ ಬಂಧಿತ. ಹುಬ್ಬಳ್ಳಿಯಲ್ಲಿ ಆರೋಪಿಯನ್ನ ವಶಕ್ಕೆ ಪಡೆಯುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. 

 ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಕುಮಾರ್ ಬೋನಾಲ್  ಸಿಬ್ಬಂದಿಗಳ ಲಾಗಿನ್ ಬಳಸಿ  2.69 ಕೋಟಿ ಲಪಟಾಯಿಸಿದ್ದ. ಆ ಹಣವನ್ನ ತನ್ನ ಪತ್ನಿ ಖಾತೆಗೆ ವರ್ಗಾಯಿಸಿಕೊಂಡಿದ್ದ. ಈ ಬಗ್ಗೆ ವಿಚಾರಣೆಯಲ್ಲಿ ಆತ ಲಪಟಾಯಿಸಿದ ಹಣವನ್ನ ಆನ್ ಲೈನ್ ಗೇಮ್ನಲ್ಲಿ ಕಳೆದುಕೊಂಡಿರುವುದಾಗಿ ಹೇಳಿದ್ದಾನೆ.

 ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.


Share: