ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ಆಹಾರ ಹಕ್ಕಿಗಾಗಿ ಸಿಪಿ‌ಐ(ಎಂ)ನಿಂದ ವಿಧಾನ ಸೌಧ ಚಲೋ

ಭಟ್ಕಳ:ಆಹಾರ ಹಕ್ಕಿಗಾಗಿ ಸಿಪಿ‌ಐ(ಎಂ)ನಿಂದ ವಿಧಾನ ಸೌಧ ಚಲೋ

Thu, 12 Nov 2009 02:59:00  Office Staff   S.O. News Service
ಭಟ್ಕಳ, ನವೆಂಬರ್ 11: ಬೆಲೆ ಏರಿಕೆ, ಆಹಾರ ಹಕ್ಕು, ರೇಶನ್ ಕಾರ್ಡ ವಿರೋಧಿಸಿ ಸಿಪಿ‌ಐ(ಎಂ) ನವೆಂಬರ್ 25 ರಂದು ಬೆಂಗಳೂರು ವಿಧಾನಸೌಧ ಚಲೋ ಕಾಯಕ್ರಮ ಹಮ್ಮಿಕೊಂಡಿದೆ.
 
ಆಹಾರ ಧಾನ್ಯ ಪ್ರಮಾಣ ಕಡಿತಗೊಳಿಸುವುದನ್ನು ಹಿಂತೆಗೆದುಕೊಳ್ಳಬೇಕು, ತಾತ್ಕಾಲಿಕ ಪಡಿತರ ಚೀಟಿಯನ್ನು ಖಾಯಂಗೊಳಿಸಬೇಕು, ಅಂಗನವಾಡಿ-ಬಿಸಿಯೂಟದ ಎಲ್ಲ ಕಾರ್ಯಕರ್ತರಿಗೂ ಬಿಪಿ‌ಎಲ್ ಕಾರ್ಡ ನೀಡಬೇಕು ಎಂದು ಆಗ್ರಹಿಸಿರುವ ಸಂಘಟನೆಯ ಪ್ರಮುಖರು ನವೆಂಬರ್ 23ರಂದು ಈ ಸಂಬಂಧ ಸರಕಾರಕ್ಕೆ ಮನವಿ ನೀಡಲು ತೀರ್ಮಾನಿಸಿದ್ದಾರೆ. ನವೆಂಬರ್ 12ರಂದು ಶಿರಾಲಿ ಹಾಗೂ 13ರಂದು ಮುರುಡೇಶ್ವರದಲ್ಲಿ ಕರಪತ್ರವಿತರಣಾ ಸಭೆ ನಡೆಯಲಿದೆ ಎಂದು ಸಿಪಿ‌ಐ(ಎಂ) ಭಟ್ಕಳ ತಾಲೂಕು ಸಮಿತಿ ತಿಳಿಸಿದೆ.


Share: