ಕಾರ್ಕಳ, ಎ.29: ಮತಾಂತರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕೌಡೂರು ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ.
ಬುಧವಾರ ರಾತ್ರಿ 11.30ರ ಸುಮಾ ರಿಗೆ ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಉಡುಪಿ ಯಿಂದ ಕೌಡೂರಿಗೆ ಬರುತ್ತಿದ್ದ ಓಮ್ನಿ ಕಾರನ್ನು ತಡೆದ ಐವರ ತಂಡ ಕಾರಿ ನಲ್ಲಿದ್ದ ನಿತ್ಯಾನಂದ ಪೂಜಾರಿ ಹಾಗೂ ಕಾರು ಸಂಚಾಲಕ ಶ್ರೀನಿವಾಸ ಆಚಾರಿ ಎಂಬವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮತಾಂತರ ನಡೆಸುತ್ತಿರುವ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಧಾಖಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.
ನಕ್ರೆ-ಗುಂಡ್ಯಡ್ಕ ಎಂಬಲ್ಲಿ ನ್ಯೂಲೈಫ್ ಸಂಸ್ಥೆಯ ಕಾರ್ಯಕ್ರಮ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗಿಯಾ ಗಿದ್ದಾಗಿ ಆರೋಪಿಸಿ ಬಜರಂಗದಳದ ತಾಲೂಕು ಸಂಚಾಲಕ ಸುಮಿತ್ ಶೆಟ್ಟಿ, ಸುರೇಶ್ ಶೆಟ್ಟಿ, ಹವಿ ಶೆಟ್ಟಿ, ಸುರೇಶ್ ನಾಯಕ್, ಮಹೇಶ್ ಶೆಣೈ ಎಂಬ ವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶ್ರೀನಿವಾಸ ಆಚಾರಿ ಆರೋಪಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ