ಮಂಗಳೂರು, ಅಕ್ಟೋಬರ್ 21: ಎಂಬಿಬಿಎಸ್. ಪಾಸಾಗಿ ಕಳೆದ ಮೂರು ವರ್ಷಗಳಿಂದ ಪಿಜಿ ಕೋರ್ಸ್ ಒಂದಕ್ಕೆ ಪ್ರವೇಶ ಪರೀಕ್ಷೆ ಬರೆಯುತ್ತಿದ್ದರೂ ನಪಾಸಾಗುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿಯೋರ್ವರು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.
ಕುದುರೆಮುಖ ಕಾವೂರು ವಸತಿಗೃಹದ ನಿವಾಸಿ ಆಶಾದೇವಿ (27) ಎಂಬುವರು ಮೂರನೇ ಬಾರಿಗೆ ವಿಫಲರಾದ ದುಃಖವನ್ನು ತಡೆಯಲಾರದೇ ಮಿತಿಮೀರಿದ ಪ್ರಮಾಣದ ಮಾತ್ರೆ ಸೇವಿಸಿ ಸೇವಿಸಿದ್ದರು. ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಪರಿಸ್ಥಿತಿ ಕೈಮೀರಿತ್ತು.