ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರದ ನಮೃತಾಗೆ ಕವಿವಿ ಐದು ಬಂಗಾರದ ಪದಕ

ಮುರ್ಡೇಶ್ವರದ ನಮೃತಾಗೆ ಕವಿವಿ ಐದು ಬಂಗಾರದ ಪದಕ

Thu, 09 Jun 2022 13:23:37  Office Staff   SO News

ಭಟ್ಕಳ : ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ  ನಡೆದ ಘಟಿಕೋತ್ಸವದಲ್ಲಿ ಮುರ್ಡೇಶ್ವರದ ಕುಮಾರಿ ನಮೃತಾ ಸಸ್ಯಶಾಸ್ತ್ರ ವಿಭಾಗದಲ್ಲಿ ಐದು ಬಂಗಾರದ ಪದಕ ಪಡೆದುಕೊಂಡಿದ್ದಾರೆ.

ಈಕೆ  ಗೀತಾ ಹಾಗೂ ಉದಯ ನಾರಾಯಣ ಶೆಟ್ಟಿ ಮುರ್ಡೇಶ್ವರ ಇವರ ಪುತ್ರಿ.ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೊಟ್ ಇವರಿಂದ  ನಮೃತಾ ಪದಕ ಪಡೆದಿದ್ದಾಳೆ.ಎಂ.ಎಸ್ಸಿ ಬೊಟನಿ ವಿಷಯದಲ್ಲಿ (ಸಸ್ಯ ಶಾಸ್ತ್ರ ವಿಷಯದಲ್ಲಿ) 5 ಬಂಗಾರದ ಪದಕವನ್ನು ಪಡೆದುಕೊಂಡು ಸಾಧನೆ ಮಾಡಿದ್ದಾರೆ.

ನಮೃತಾ  ಮುರ್ಡೇಶ್ವರದ ಆರ್ ಎನ್ ಎಸ್ ವಿದ್ಯಾನಿಕೇತನದಲ್ಲಿ ಎಸ್ ಎಸ್ ಎಲ್ ಸಿ, ಪದವಿ ಪೂರ್ವ ವ್ಯಾಸಂಗ ಮಾಡಿ ಹೊನ್ನಾವರದ ಎಸ್ ಡಿ ಎಮ್ ಮಹಾವಿದ್ಯಾಲಯದಲ್ಲಿ  ಬಿ ಎಸ್ ಸಿ ಪದವಿ ಪಡೆದಿದ್ದಾರೆ.

 ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ನಮೃತಾ ಇವರಿಗೆ ತಾಲೂಕು ಗಾಣಿಗ ಸೇವಾಸಂಘದ ಪರವಾಗಿ ಶ್ರೀಧರ ಶೆಟ್ಟಿ ಸುಭಾಷ್ ಶೆಟ್ಟಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಪರಿಷತ ಸದಸ್ಯ ಪ್ರಕಾಶ ಶಿರಾಲಿ, ಗಜಾನನ ಶೆಟ್ಟಿ,ಎಂ ಆರ್ ಮುರ್ಡೇಶರ ಉಪನ್ಯಾಸಕ ರಾಜೇಶ ಶೆಟ್ಟಿ,  ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.


Share: