ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರ್ಡೇಶ್ವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಮುರ್ಡೇಶ್ವರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

Tue, 11 Jul 2023 21:32:38  Office Staff   SOnews


ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಸಮಾಜಸೇವಾ ಕಾರ್ಯಗಳಿಂದ ೩೧೭ಬಿ ಲಯನ್ ಜಿಲ್ಲೆಯಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ ಎಂದು ಸಹಪ್ರಾಧ್ಯಾಪಕರು ಹಾಗೂ ಎಸ್.ಡಿ.ಎಮ್ ಕಾಲೇಜಿನ ಮುಖ್ಯಸ್ಥ ಎಮ್.ಜೆ.ಎಫ್ ಲಯನ್ ಡಾ.ಸುರೇಶ ಎಸ್. ಹೇಳಿದರು.

ಅವರು ಮುರ್ಡೇಶ್ವರದ ಪಾಮ್‌ಗ್ರೋವ್ ಹೊಟೇಲ್‌ಲ್ಲಿ ನಡೆದ ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ೨೦೨೩-೨೪ನೇ ಲಯನ್ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. 

ಮುಖ್ಯ ಅತಿಥಿಗಳಾಗಿ ಆರ್.ಎನ್.ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಸಂಜಯ ಕೆ.ಎಸ್., ಅಸಹಾಯಕರಿಗೆ ಸಹಾಯಹಸ್ತ ನೀಡುವ ಲಯನ್ಸ್ನ ಸೇವಾಕಾರ್ಯವನ್ನು ಶ್ಲಾಘಿಸಿದರು.

ಮುರ್ಡೇಶ್ವರ ಲಯನ್ಸ್ ಕ್ಲಬ್‌ನ ನೂತನ ಅಧ್ಯಕ್ಷರಾದ ಗಜಾನನ ಭಟ್, ಕಾರ್ಯದರ್ಶಿಗಳಾದ ಕೃಷ್ಣ ಬಿ ಹೆಗಡೆ, ಕೋಶಾಧ್ಯಕ್ಷರಾದ ಡಾ.ವಾಧಿರಾಜ ಭಟ್‌ರವರಿಗೆ ಪ್ರಮಾಣವಚನ ಬೋಧಿಸಲಾಯಿತು.

ಮೊದಲ ಉಪಾಧ್ಯಕ್ಷರಾಗಿ ವಿಶ್ವನಾಥ ಮಡಿವಾಳ, ಎರಡನೇ ಉಪಾಧ್ಯಕ್ಷರಾಗಿ ಬಸ್ತಾö್ಯಂವ್ ಡಿಕೋಸ್ತಾ, ಲಯನ್ ಆಡಳಿತಾಧಿಕಾರಿಯಾಗಿ ನಾಗೇಶ ಮಡಿವಾಳ, ಸದಸ್ಯತ್ವ ಅಭಿಯಾನದ ಅಧ್ಯಕ್ಷರಾಗಿ ಡಾ.ಸುನೀಲ್ ಜತ್ತನ್, ಕ್ಲಬ್ ಸಮನ್ವಯಾಧಿಕಾರಿಯಾಗಿ ನಾಗರಾಜ ಭಟ್, ಸೇವಾ ಚಟುವಟಿಕೆಗಳ ಅಧ್ಯಕ್ಷರಾಗಿ ಸುಬ್ರಾಯ ನಾಯ್ಕ, ವ್ಯಾವಹಾರಿಕ ಸಂವಹನದ ಅಧ್ಯಕ್ಷರಾಗಿ ಎಮ್.ವಿ ಹೆಗಡೆ, ಲಯನ್ ಟೇಮರ್ ಆಗಿ ವಿಶ್ವನಾಥ ಕಾಮತ, ಟೇಲ್‌ಟ್ವಿಸ್ಟರ್ ಆಗಿ ಡಾ.ಮನೋಜ್ ಆಚಾರ್ಯ, ನಿರ್ದೇಶಕರುಗಳಾಗಿ ಡಾ.ಆಯ್.ಆರ್ ಭಟ್, ಕಿರಣ ಮಾನಕಾಮೆ, ಗೌರೀಶ ಆರ್ ನಾಯ್ಕ, ಮಂಜುನಾಥ ನಾಯ್ಕ, ಡಾ.ಹರಿಪ್ರಸಾದ ಕಿಣಿ, ಕಿರಣ ಕಾಯ್ಕಿಣಿ ಹಾಗೂ ಗೌರೀಶ್ ಟಿ ನಾಯ್ಕರವರನ್ನು ನಿಯುಕ್ತಿಗೊಳಿಸಲಾಯಿತು.

ಭಟ್ಕಳ ತಾಲೂಕಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ಪ್ರೌಢಶಾಲೆ ಬೆಳ್ಕೆಯ ಶಿಕ್ಷಕ ಎನ್.ಜಿ ಗೌಡರಿಗೆ “ಉಡುಪ ಪ್ರಶಸ್ತಿ” ಹಾಗೂ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ಹಿರಿಯ ಪ್ರಾಥಮಿಕ ಉಳ್ಮಣ್ ಶಾಲೆಯ ಶಿಕ್ಷಕ ಶಂಕರ ನಾಯ್ಕರಿಗೆ “ವಾಜಂತ್ರಿ ಪ್ರಶಸ್ತಿ” ನೀಡಿ ಗೌರವಿಸಲಾಯಿತು.

ನಿಕಟಪೂರ್ವ ಅಧ್ಯಕ್ಷ ಎಮ್.ವಿ ಹೆಗಡೆ, ನೂತನ ಅಧ್ಯಕ್ಷ ಗಜಾನನ ಭಟ್Àರಿಗೆ ಅಧಿಕಾರ ಹಸ್ತಾಂತರಿಸಿದರು. 

ನೂತನ ಅಧ್ಯಕ್ಷರು ಮಾತನಾಡಿ ಕ್ಲಬ್‌ನ ಎಲ್ಲಾ ಸದಸ್ಯರ ಸಹಯೋಗದೊಂದಿಗೆ ಎಲ್ಲರಿಗೂ ಮಾದರಿಯಾಗುವ ರೀತಿಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಮಾಡಲು ಸಿದ್ಧರಿರುವುದಾಗಿ ತಿಳಿಸಿದರು.

ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ ಲಯನ್ ವರ್ಷದ ಸಮಗ್ರ ವರದಿಯನ್ನು ಮಂಡಿಸಿದರು. ಎಮ್.ವಿ ಹೆಗಡೆ ಸ್ವಾಗತಿಸಿದರು. ಡಾ.ವಾಧಿರಾಜ ಭಟ್ ವಂದಿಸಿದರು. ಕೆ.ಬಿ ಹೆಗಡೆ ಹಾಗೂ ನಾಗೇಶ ಮಡಿವಾಳರವರು ಕಾರ್ಯಕ್ರಮ ನಿರ್ವಹಿಸಿದರು.
 


Share: