ಭಟ್ಕಳ:ತಾಲೂಕಿನ ಮುರ್ಡೇಶ್ವರ ಜಾತ್ರೆಗೆ ಆಗಿಸಿದ ಚಿಕ್ಕಮಕ್ಕಳನ್ನೆ ಟಾರ್ಗೇಟ್ ಮಾಡಿ ಕಳ್ಳತನ ನಡೆಸುತ್ತಿದ್ದ ಮಹಾರಾಷ್ಟ ಮೂಲದ ಖತರ್ನಾಕ ಕಳ್ಳರನ್ನು ಮುರ್ಡೇಶ್ವರ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ ಮೂಲದ ಶಿವಾಜಿ, ಶ್ಯಾಮರಾವ್ ಭೀಮರಾವ್ ಜಾದವ, ಅರ್ಜುನ್ ಶುಕ್ಲಾ ಬಂಧಿತರು. ತಾಲೂಕಿನ ಮುರ್ಡೇಶ್ವರ ಜಾತ್ರೆಗೆ ಬಂದಿದ್ದ ತಾಯಿಯೊಂದಿಗೆ ಇದ್ದ ಮಕ್ಕಳನ್ನು ಕಳ್ಳರು ಟಾರ್ಗೆಟ್ ಮಾಡುತ್ತಿದ್ದರು. ಗುರುವಾರವೂ ಚಿಕ್ಕ ಬಾಲಕಿಯ ಸರ ಎಗರಿಸಿ ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಮೊದಲು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಶುಕ್ರವಾರ ರಥೋತ್ಸವದ ಸಂದರ್ಬದಲ್ಲಿ ೩.೫ವಷಧದ ಬಾಲಕ, ೬ವರ್ಷದಬಾಲಕಿಯ ಸರ ಎಗರಿಸಿ ಪರಾರಿಯಾಗುತ್ತಿದ್ದವರನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡಿದ್ದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳರನ್ನು ವಶಕ್ಕೆ ಪಡೆದಿದ್ದಾರೆ. ಹೊನ್ನಿಗದ್ದೆ ಮೂಲದ ಬಾಲಕಿಯ ಸರವನ್ನು ಎಗರಿಸಿ ಪರಾರಿಯಾಗಿದ್ದ ಮತ್ತೊರ್ವ ಕಳ್ಳನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.