ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರುಡೇಶ್ವರದಲ್ಲಿ ನೀರು ಪಾಲಾಗಿದ್ದ ಸುಶಾಂತ ಶವ ಪತ್ತೆ

ಮುರುಡೇಶ್ವರದಲ್ಲಿ ನೀರು ಪಾಲಾಗಿದ್ದ ಸುಶಾಂತ ಶವ ಪತ್ತೆ

Sun, 12 Jun 2022 01:25:50  Office Staff   sonews

ಭಟ್ಕಳ:ಗುರುವಾರ ಮುರುಡೇಶ್ವರದಲ್ಲಿ ಈಜಲು ಸಮುದ್ರದಲ್ಲಿ ಇಳಿದು ನೀರು ಪಾಲಾಗಿದ್ದ ಇಬ್ಬರ ಪೈಕಿ ಶಿವಮೊಗ್ಗ ಆಗುಂಬೆ ನಿವಾಸಿ ಸುಶಾಂತ ಎಮ್.ಎಸ್.
ಈತನ ಶವವು ಮುರುಡೇಶ್ವರ ಕಡಲ ತೀರದಲ್ಲಿ ಪತ್ತೆಯಾಗಿದೆ.
ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸುಶಾಂತ ಮರಣೋತ್ತರ ಪರೀಕ್ಷೆಯನ್ನು ನಡೆಸಿದ ನಂತರ ಅವರ ಕುಟುಂಬ ವರ್ಗದವರಿಗೆ ಶವವನ್ನು ಹಸ್ತಾಂತರಿಸಲಾಯಿತು.
ಕೋಲಾರ ಶ್ರೀನಿವಾಸಪುರದ ಅಬ್ರಾರ್ ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದ್ದು, ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಐ ಪರಮಾನಂದ ಕಣ್ಣೂರು ತನಿಖೆ ಕೈಗೊಂಡಿದ್ದಾರೆ.


Share: