ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ಪಾದಚಾರಿರಿಗೆ ಬೈಕ್ ಢಿಕ್ಕಿ:ಪಾದಚಾರಿ ಸಾವು

ಮುರುಡೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ಪಾದಚಾರಿರಿಗೆ ಬೈಕ್ ಢಿಕ್ಕಿ:ಪಾದಚಾರಿ ಸಾವು

Fri, 21 Jul 2023 05:56:15  Office Staff   SO News

ಮುರುಡೇಶ್ವರ: ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಅಪರಿಚ ವ್ಯಕ್ತಿಯೋರ್ವನಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಮುರುಡೇಶ್ವರ ರೈಲ್ವೇ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಮೀಪ ನಡೆದಿದೆ. 

ಮೃತ ವ್ಯಕ್ತಿಯ ಅಪರಿಚಿತನಾಗಿದ್ದು ಸುಮಾರು 35 ರಿಂದ 40 ವರ್ಷ ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಈತನ ಬಲ ಗೈ ಈ ಮೊದಲೇ ಸಂಪೂರ್ಣ ಕಟ್ಟಾಗಿರುತ್ತದೆ.ಈತ ಮುರುಡೇಶ್ವರ ರೈಲ್ವೇ ಸಮೀಪದ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಹೊನ್ನಾವರ ಕಡೆಯಿಂದ ಮುರುಡೇಶ್ವರ ಕಡೆಗೆ ಅತಿ ವೇಗ ಹಾಗೂ ಅಜಾಗರುಕತೆಯಿಂದ ಬೈಕ್ ಚಲಾಯಿಸಿಕೊಂಡು ಬಂದ ಬೈಕ್ ಸವಾರ ಹೆದ್ದಾರಿ ದಾಟುತ್ತಿದ್ದ ಅಪರಿಚ ವ್ಯಕ್ತಿಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಪಾದಚಾರಿ ತಲೆ ತೀವ್ರವಾಗಿ ಗಾಯಗಳಾಗಿದ್ದು ತಕ್ಷಣ ಅಲ್ಲೇ ಸಮೀಪವಿದ್ದ ಆರ್.ಎನ್.ಎಸ್ ಆಸ್ಪತ್ರೆಗೆ ದಾಖಲಿಸಿದ್ದಾದರು ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ ಪಾದಾಚಾರಿ ವ್ಯಕ್ತಿ ಸಾವನ್ನಪಿದ್ದಾನೆ. ಹಾಗೂ ಬೈಕ್ ಸವಾರ ಕ್ಲಿಟಸ್ ಅಗ್ನೆಲ್ ದಿಸೋಜಾ ತಲೆಗೆ ಗಾಯಗಳಾಗಿದೆ. 

ಈ ಕುರಿತು ಬೈಕ್ ಸವಾರನ ವಿರುದ್ಧ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: