ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮುರುಡೇಶ್ವರ ಜನತಾ ಕಾಲೋನಿಯಲ್ಲಿ ಮನೆಯ ಬಾಗಿಲು ಮುರಿದು ಕಳ್ಳತನ

ಮುರುಡೇಶ್ವರ ಜನತಾ ಕಾಲೋನಿಯಲ್ಲಿ ಮನೆಯ ಬಾಗಿಲು ಮುರಿದು ಕಳ್ಳತನ

Wed, 20 Jul 2022 07:06:55  Office Staff   SO NEWS

ಭಟ್ಕಳ: ಯಾರೋ ಕಳ್ಳರು ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಸುಮಾರು 50 ರಿಂದ 60 ಗ್ರಾಂ ತೂಕದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಮಾವಳ್ಳಿ-1 ರ ಜನತಾ ಕಾಲೋನಿಯಲ್ಲಿ ನಡೆದಿದೆ. 

ಮಾದೇವ ಈರಪ್ಪ ನಾಯ್ಕ ಎನ್ನುವವರ ಮನೆ ಕಳ್ಳತನವಾಗಿದೆ. ಕಳೆದ 15 ದಿನದ ಹಿಂದಷ್ಟೇ ಇವರ ತಂದೆ ನಿಧನರಾಗಿದ್ದು ಅವರ ಕಾರ್ಯ ಮಾಡಲು ತನ್ನ ಹೆಂಡತಿಯೊಂದಿಗೆ ಜನತಾ ಕಾಲೋನಿಯಲ್ಲಿರುವ ತಮ್ಮ ಹಳೆಯ ಮನೆಗೆ ಹೊಗಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿ ಮರು ದಿನ ಬೆಳ್ಳಿಗ್ಗೆ ಮನೆಗೆ ಬಂದು ನೋಡಿದಾಗ ಮನೆಯ  ಮುಂಬಾಗಿಲು ಮುರಿದು ಕಳ್ಳತನ ಮಾಡಿರುದನ್ನು ಗಮನಿಸಿದ ಮನೆಯ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ತೆರೆದು ನೋಡಿದಾಗ ಯಾರೋ ಕಳ್ಳರು ಮುಂಭಾಗಿಲಿನ ಇಂಟರ್ ಲಾಕ್ ಮುರಿದು ಮನೆಯ ಒಳಗಡೆ ಪ್ರವೇಶಿಸಿ ಕೋಣೆ ಯಲ್ಲಿರುವ ಕಪಾಟನ್ನು ಮುರಿದು ಕಪಾಟಿನಲ್ಲಿದ್ದ ಸುಮಾರು 2 ಲಕ್ಷ 80 ಸಾವಿರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. 

ಕಳುವಾದ ಚಿನ್ನಾಭರಣಗಳು:7 ಬಂಗಾರದ ಉಂಗುರ , 2 ಬಂಗಾರದ ಬಳೆ, 1 ಬಂಗಾರದ ಬ್ರಾಸ್ ಲೈಟ್,  1 ಬಂಗಾರದ ಚೈನ್, 2 ಬಂಗಾರದ ನಕ್ಲೆಸ್ ಗಳು ಕಳ್ಳತನವಾದೆ . ಇವೆಲ್ಲ ಚಿನ್ನಾಭರಣ ಇವರ ಮದುವೆಗೆ ಬಂದ ಉಡುಗೊರೆಗಳಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: