ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಂಜೇಶ್ವರ:ಭಜರಂಗಿಗಳ ಮೇಲೆ ಕಠಿಣ ಕ್ರಮಕ್ಕೆ ಪಿ.ಡಿ.ಪಿ.ಆಗ್ರಹ

ಮಂಜೇಶ್ವರ:ಭಜರಂಗಿಗಳ ಮೇಲೆ ಕಠಿಣ ಕ್ರಮಕ್ಕೆ ಪಿ.ಡಿ.ಪಿ.ಆಗ್ರಹ

Fri, 06 Nov 2009 04:18:00  Office Staff   S.O. News Service
ಮಂಜೇಶ್ವರ, ನವೆಂಬರ್ 5: ಪರಸ್ಪರ ಅರಿತು ಬಾಳುವ ಹಾಗು ಮತೀಯ ಸಾಮರಸ್ಯ ನೆಲೆನಿಂತಿರುವ ಶಾಂತಿಯ ನೆಲೆವೂರಾದ ಮಂಜೇಶ್ವರ ಪ್ರದೇಶಗಳಲ್ಲಿ ಸಾಮರಸ್ಯ ಕೆಡಿಸಿ ಕೋಮುಗಲಭೆಗಳನ್ನು ಎಬ್ಬಿಸಿ ಶಾಂತಿ ಕೆದಡಲು ಪ್ರಯತ್ನಿಸುತ್ತಿರುವ ಭಜರಂಗಿಗಳ ಪ್ರಯತ್ನವು ಖಂಡನೀಯವೆಂದು ಪಿಡಿಪಿ ವರ್ಕಾಡಿ ಪಂಚಾಯತ್ ಆರೋಪಿಸಿದೆ.

ವರ್ಕಾಡಿ ಕೂಡ್ಲಮೊಗರು ವಾಣಿ ವಿಜಯ ಪ್ರೌಢಶಾಲೆಯಲ್ಲಿ ನಡೆಯಬೇಕಾದ ಶಾಲಾ ಕಲೋತ್ಸವಕ್ಕೆ ಪೂರ್ವ ತಯಾರಿಯನ್ನು ನಡೆಸುತಿದ್ದ ಅಮಾಯಕ ಮುಸ್ಲಿಂ ವಿಧ್ಯಾರ್ಥಿಗಳ ಮೆಲೆ ಅಕ್ರಮಿಸಿ ರೌದ್ರವ ತಾಂಡವಾಡಿದ ಭಜರಂಗಿಗಳ ಸಂರಕ್ಷಣೆಗೆ ತೆರೆ ಮರೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸಲಾಗುವುದೆಂದು ಪಿ.ಡಿ.ಪಿ.ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಶಾಲಾ ವಿಧ್ಯಾರ್ಥಿಗಳೀಗೆ ನ್ಯಾಯ ದೊರಕಿಸಿ ಕೃತ್ಯ ನಡೆಸಿ ಪರಾರಿಯಾಗಲೆತ್ನಿಸುವುದರ ಮಧ್ಯೆ ಸಿಕ್ಕಿ ಬಿದ್ದ ಭಜರಂಗ ಧಳ ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪಿಡಿಪಿ ಯು ಜಿಲ್ಲಾ ಪೋಲೀಸ್ ವರಿಷ್ಟರೀಗೆ ರಾಜ್ಯದ  ಮುಖ್ಯ ಮಂತ್ರಿ ಹಾಗು ಗೃಹ ಮಂತ್ರಿಯವರೀಗೆ ಫ್ಯಾಕ್ಸ್ ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದೆ.
 
ವರ್ಕಾಡಿಯಲ್ಲಿ ನಡೆದ ಖಂಡನಾ ಸಭೆಯ ಅಧ್ಯಕ್ಶತೆಯನ್ನು ಉಮ್ಮರ್ ಓಡಂಗಲ ನಿರ್ವಹಿಸಿದರು.ನೇತಾರರಾದ ಎಸ್.ಎಂ.ಬಷೀರ್,ಅಂಕಮ್ಮದ್,ಮಹಮ್ಮದ್ ಮಾವಿನಕಟ್ಟೆ,ಯೋಗೀಶ್ ವರ್ಕಾಡಿ ಅಬ್ದುಲ್ ರಹಿಮಾನ್,ಹನೀಫ್ ಮೀಂಜ,ಮೊಯಿದೀನ್ ವರ್ಕಾಡಿ,ಅಬ್ದುಲ್ ರಜಾಕ್, ಅಬ್ದುಲ್ಲಾ ಮೊದಲಾದವರು ಭಜರಂಗಧಳದ ಕೃತ್ಯವನ್ನು ಖಂಡಿಸಿದರು.

ವರದಿ: ಅಬ್ದುಲ್ ರಹಮಾನ್ ಉದ್ಯಾವರ




Share: