ಮೈಸೂರು, ಮಾ. 18 : ತಮಿಳು ಚಿತ್ರನಟಿ ರಂಜಿತಾಳ ರಾಸಲೀಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸ್ವಾಮಿ ನಿತ್ಯಾನಂದಗೆ ಸೇರಿದ ಬಿಡದಿ ಸಮೀಪದ ನಿತ್ಯಾನಂದ ಧ್ಯಾನಪೀಠದ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲು ಯೋಚಿಸಿಲ್ಲ ಎಂದು ಗೃಹ ಸಚಿವ ವಿಎಸ್ ಆಚಾರ್ಯ ಸ್ಪಷ್ಟಪಡಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಸಲೀಲೆ ಪ್ರಕರಣ ಬಿಡದಿಯಲ್ಲೇ ನಡೆದಿದೆ ಎಂಬ ಬಗ್ಗೆ ನಮಗೆ ಇನ್ನು ಮಾಹಿತಿ ಲಭ್ಯವಾಗಿಲ್ಲ. ಪ್ರಕರಣ ಕುರಿತು ತಮಿಳುನಾಡು ಸರಕಾರ ರಾಜ್ಯ ಎಡಿಜಿಪಿ ಎ ಆರ್ ಇನ್ಫಂಟ್ ಅವರಿಗೆ ಪತ್ರವನ್ನು ಬರೆದು ಹಸ್ತಾಂತರಿಸಿದೆ. ನಿತ್ಯಾನಂದ ಸ್ವಾಮಿ ಅಶ್ರಮದ ಆಸ್ತಿ ಬಗ್ಗೆ ಸರಕಾರಕ್ಕೆ ಯಾವುದೇ ಪ್ರಮುಖ ದೂರುಗಳು ಬಂದಿಲ್ಲ. ಹಾಗಾಗಿ ಆಸ್ತಿ ಮುಟ್ಟುಗೋಲು ಪ್ರಶ್ನೆ ಉದ್ಭವಿಸಿಲ್ಲ ಎಂದು ಆಚಾರ್ಯ ಹೇಳಿದರು.