ಉಜಿರೆ, ಡಿಸೆಂಬರ್ 3: ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಮಂಗಳವಾರ ಮಧ್ಯಾಹ್ನ ವಿಶ್ವ ತುಳು ಸಮ್ಮೇಳನ ಮುಖ್ಯ ಕಚೇರಿಗೆ ಭೇಟಿ ನೀಡಿದರು.
ಅವರನ್ನು ಡಾ. ಶ್ರೀನಾಥ್ ಎಂ.ಪಿ ಹಾರಾರ್ಪಣೆ ಮಾಡಿ ಸ್ವಾಗತಿಸಿದರು. ಸ್ವಾಮೀಜಿಯವರು ವೆಬ್ಸೈಟ್ ಮೂಲಕ ವಿಶ್ವ ತುಳು ಸಮ್ಮೇಳನದ ಪೂರ್ಣ ಮಾಹಿತಿಯನ್ನು ಪಡೆದುಕೊಂಡರು. ಅವರು ಸಮ್ಮೇಳನದ ಸಭಾಂಗಣ ವ್ಯವಸ್ಥೆ ಹಾಗೂ ಮಾದರಿ ತುಳು ಗ್ರಾಮದ ವ್ಯವಸ್ಥೆಗಳ ಬಗೆಗೆ ತಿಳಿದುಕೊಂಡು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಮಹಾವೀರ ಅಜ್ರಿ, ಶ್ರೀಹರಿ, ರಾಮಕೃಷ್ಣ ಭಟ್ ಚೊಕ್ಕಾಡಿ, ಸಾಂತೂರ್ ಶ್ರೀನಿವಾಸ ತಂತ್ರಿ, ದೀಪಕ್ ಅಠವಳೆ, ಗುರುರಾಜ್, ರವಿ ಮೊದಲಾದವರು ಉಪಸ್ಥಿತರಿದ್ದರು. ಶ್ರೀಗಳವರು ಮಂತ್ರಕ್ಷತೆ ನೀಡಿ ಆಶೀರ್ವದಿಸಿದರು.