ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು, ’ಜೀವ ವೈವಿಧ್ಯ ಸಂರಕ್ಷಣೆಯ’ ಕುರಿತ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುವ ಫೋನ್ ಇನ್ ಕಾರ್ಯಕ್ರಮ

ಬೆಂಗಳೂರು, ’ಜೀವ ವೈವಿಧ್ಯ ಸಂರಕ್ಷಣೆಯ’ ಕುರಿತ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸುವ ಫೋನ್ ಇನ್ ಕಾರ್ಯಕ್ರಮ

Sun, 07 Mar 2010 03:01:00  Office Staff   S.O. News Service

ಬೆಂಗಳೂರು, ಮಾರ್ಚ್ ೬ (ಕರ್ನಾಟಕ ವಾರ್ತೆ): ಮಾರ್ಚ್ ೯ ರಂದು ರಾತ್ರಿ ೯-೧೫ ಕ್ಕೆ ಆಕಾಶವಾಣಿ ಕೇಂದ್ರ ಧಾರವಾಡ, ಇವರು ಆಯೋಜಿಸಿರುವ ರಾಜ್ಯವ್ಯಾಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರು ಶ್ರೀ ಅನಂತ ಹೆಗಡೆ ಆಶೀಸರ, ಇವರು ’ಜೀವ ವೈವಿಧ್ಯ ಸಂರಕ್ಷಣೆಯ’ ಕುರಿತ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಆಸಕ್ತರು ದೂರವಾಣಿ ೦೮೩೬ ೨೪೪೩೪೧೪, ೨೪೪೩೪೧೫, ೨೪೪೩೪೧೬ ನ್ನು ಸಂಪರ್ಕಿಸಬಹುದಾಗಿದೆ.

 


ಉಚಿತ ಯೋಗಾಸನ ಶಿಬಿರ

 

ಬೆಂಗಳೂರು, ಮಾರ್ಚ್ ೬ (ಕರ್ನಾಟಕ ವಾರ್ತೆ): ಸರ್ವರಿಗೂ ಆರೋಗ್ಯ ಕಾಪಾಡಿಕೊಳ್ಳುವ ಹಿತದೃಷ್ಟಿಯಿಂದ ಉಚಿತ ಯೋಗಾಸನ, ಪ್ರಾಣಾಯಾನ ಮತ್ತು ಧ್ಯಾನ ತರಗತಿಗಳನ್ನು ಮಾಚ್ ೧೦ ರಿಂದ ೩೧ ರವರೆಗೆ ಶ್ರೀ ಜಯಚಾಮರಾಜೇಂದ್ರ ಭಾರತೀಯ ವೈದ್ಯಕೀಯ ಸಂಸ್ಥೆಯ ಆವರಣ, ಧನ್ವಂತರಿ ರಸ್ತೆ, ಬೆಂಗಳೂರು -೯ (ಆನಂದರಾವ್ ವೃತ್ತ ಹತ್ತಿರ/ ಮೆಜಿಸ್ಟಿಕ್) ಇಲ್ಲಿ ಸಮಯ ಬೆಳಿಗ್ಗೆ ೮-೩೦ ರಿಂದ ೧೦.೦೦ ಮತ್ತು ಸಂಜೆ ೪.೦೦ ರಿಂದ ೬.೦೦ ಗಂಟೆಯವರೆಗೆ ನಡೆಸಲಾಗುತ್ತದೆ. ಹೆಚ್ಚಿನ ವಿವರಗಳಿಗೆ ೨೮೭೧೬೦೦ / ೯೯೭೨೦೦೫೭೮೨ ಸಂಪರ್ಕಿಸಬಹುದಾಗಿದೆ.

 

 

ಕನ್ನಡ ನಾಡು ನುಡಿ ಗಮನ ಸೆಳೆಯಲು ಕೇಂದ್ರಕ್ಕೆ ನಿಯೋಗ

 

ಬೆಂಗಳೂರು, ಮಾರ್ಚ್ ೬ (ಕರ್ನಾಟಕ ವಾರ್ತೆ): ಕನ್ನಡ ನಾಡು ನಡಿ ನೆಲ ಜಲದ ವಿಷಯದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗಣ್ಯರ ನಿಯೋಗವು ದೆಹಲಿಗೆ ತೆರಳಿದೆ ಎಂದು ಪ್ರಾಧಿಕಾರದ ಅಧ್ಯಕ್ಷರಾದ ಡಾ: ಮುಖ್ಯಮಂತ್ರಿ ಚಂದ್ರು ಅವರು ತಿಳಿಸಿದರು.

 

ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು ಸಾಹಿತ್ಯ, ರಂಗಭೂಮಿ, ಕೈಗಾರಿಕಾ ಕ್ಷೇತ್ರಗಳನ್ನೊಳಗೊಂಡಂತೆ ೩೦ ಜನರ ನಿಯೋಗವು ಇದೇ ಮಾರ್ಚ್ ೭ ರಿಂದ ೧೨ ರವರೆಗೆ ದೆಹಲಿಗೆ ತೆರಳಿ ಮಾನ್ಯ ಪ್ರಧಾನ ಮಂತ್ರಿಗಳು ಸೇರಿದಂತೆ ವಿವಿಧ ಇಲಾಖಾ ಸಚಿವರನ್ನು ಭೇಟಿ ಮಾಡಿ ಕೆಲವು ಮಹತ್ವದ ವಿಷಯಗಳ ತಮ್ಮ ಹಕ್ಕೊತ್ತಾಯ ಮಂಡಿಸುವುದಾಗಿ ತಿಳಿಸಿದರು.

 

ಅವರು ಈ ಸಂದರ್ಭದಲ್ಲಿ ಪ್ರಮುಖವಾಗಿ ಶಾಸ್ತ್ರೀಯ ಭಾಷೆಯ ಅಧ್ಯಯನ -ಸಂಶೋಧನೆಗೆ ಅಗತ್ಯವಾದ ಹಣವನ್ನು ಶೀಘ್ರದಲ್ಲೆ ಬಿಡುಗಡೆ ಮಾಡುವಂತೆ ಹಕ್ಕೊತ್ತಾಂii ಮಂಡಿಸುವ ಜೊತೆಗೆ ಪ್ರಾಥಮಿಕ ಹಂತ ಶಿಕ್ಷಣವು ರಾಜ್ಯಭಾಷೆಯಲ್ಲಿ ಆಗುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವುದು ಹಾಗೂ ಸರ್ವರಿಗೂ ಸಮಾನ ಶಿಕ್ಷಣ ನೀತಿಯನ್ನು ರೂಪಿಸುವುದು ಹಾಗೂ ಸರ್ವರಿಗೂ ಸಮಾನ ಶಿಕ್ಷಣ ದೊರೆಯುವಂತೆ ಮಾಡುವುದು, ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಉದ್ಯೋಗ ನೀತಿಯನ್ನು ಜಾರಿಗೊಳಿಸುವುದು. ನದಿ ನೀರು ಹಂಚಿಕೆಯ ವಿವಾದಗಳನ್ನು ಆದ್ಯತೆಯ ಮೇರೆಗೆ ಪರಿಪರಿಸುವುದು, ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಕಲಂ ೩೭೧- ಡಿ ಯನ್ನು ಜಾರಿಗೊಳಿಸಿ ವಿಶೇಷ ಸ್ಥಾನಮಾನ ನೀಡುವುದು. ಮಹಾಜನ್ ವರದಿಯನ್ನು ಕೂಡಲೆ ಜಾರಿಗೊಳಿಸುವುದು, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಶಾಖೆಗೆ ಸ್ವಾಯುತ್ತತೆ ನೀಡುವುದು ಸೇರಿದಂತೆ ಏಳು ವಿಷಯಗಳ ಬಗ್ಗೆ ಸಂವಾದ ನಡೆಸಲಾಗುವುದು ಎಂದರು.

ರಾಜ್ಯದ ಎಲ್ಲಾ ಲೋಕಸಭಾ ಸದಸ್ಯರು ರಾಜ್ಯ ಸಭಾ ಸದಸ್ಯರು ಹಾಗೂ ರಾಜ್ಯದ ಕೇಂದ್ರ ಸಚಿವರಗಳನ್ನು ಭೇಟಿ ಮಾಡಲಾಗುವುದು. ಪಕ್ಷಭೇದ ಮರೆತು ಎಲ್ಲಾ ಮುಖಂಡರು ನಮ್ಮ ನಿಯೋಗದ ಹಕ್ಕೊತ್ತಾಯಗಳಿಗೆ ಬೆಂಬಲ ನೀಡಿದ್ದಾರೆ. ಮಾಚ್ ೯ ರಂದು ಮುಖ್ಯಮಂತ್ರಿಗಳು ಸಹ ದೆಹಲಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

 

ಹೊರ ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಒಟ್ಟು ೭ ವಿಶ್ವವಿದ್ಯಾನಿಲಯಗಳಲ್ಲಿ ಒಟ್ಟು ೬೩ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದು ಅವರಿಗೆ ತಿಂಗಳಿಗೆ ೨ ಸಾವಿರ ರೂ.ಗಳಂತೆ ರೂ. ೧೨,೯೪,೦೦೦/- ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಉಪನ್ಯಾಸಕರ ಕೊರತೆಯಿರುವುದರಿಂದ ಗುತ್ತಿಗೆ ಆಧಾರದಲ್ಲಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದರು.


Share: