ಮಂಗಳೂರು, ಫೆ.೨: ಕುಂಪಲದಲ್ಲಿ ಎರಡು ಮಸೀದಿ ಹಾಗೂ ಅನಾಥಾಶ್ರಮ, ನಂತೂರು, ಭಟ್ಕಳ, ಮೈಸೂರು ಮೊದಲಾದ ಕಡೆ ಚರ್ಚ್‌ಗಳ ಮೇಲೆ ದಾಳಿ ಇವು ಸಂಘ ಪರಿವಾರದ ಕುಮ್ಮಕ್ಕಿನಂತೆ ಬಜರಂಗದಳ, ಶ್ರೀರಾಮಸೇನೆ ಮೊದಲಾದ ಸಂಘಟನೆಗಳು ಯಾವುದೇ ಭೀತಿ ಇಲ್ಲದೆ ನಿರಾತಂಕವಾಗಿ ನಡೆಸುತ್ತಿದ್ದು, ರಾಜ್ಯ ಸರಕಾರದ ವೈಫಲ್ಯವೇ ಇದಕ್ಕೆ ಮುಖ್ಯ ಕಾರಣ ಎಂದು ಕರ್ನಾಟಕ ಮುಸ್ಲಿಂ ಪರಿಷತ್ ಖಂಡಿಸಿದೆ.
ಪರಿಸ್ಥಿತಿ ಹೀಗೇ ಮುಂದುವರಿದರೆ ರಾಜ್ಯದಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಪಂಗಡದವರು ಮತ್ತು ಹಿಂದುಳಿದ ವರ್ಗದವರು ರೊಚ್ಚಿಗೇಳುವ ಮೊದಲೇ ಕೇಂದ್ರ ಯುಪಿಎ ಸರಕಾರ ಹಾಗೂ ರಾಜ್ಯಪಾಲರು ಮಧ್ಯ ಪ್ರವೇಶಿಸಿ ರಾಜ್ಯ ಸರಕಾರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪರಿಷತ್‌ನ ಅಧ್ಯಕ್ಷರಾದ ಹಮೀದ್ ಕಂದಕ್, ಪ್ರಧಾನ ಕಾರ್ಯದರ್ಶಿ ನದೀಂ ಉಳ್ಳಾಲ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ದುಷ್ಟ ಶಕ್ತಿಗಳನ್ನು ಹತ್ತಿಕ್ಕಲು ವಿಫಲವಾಗಿರುವ ಗೃಹ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ