ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಂದಾಪುರ: ಇಂದು ಸಂಜೆ ನಗರದಲ್ಲಿ ಮೊಂಬತ್ತಿ ಸಭೆ ಆಯೋಜಿಸಿರುವ 'ಸಹಮತ'

ಕುಂದಾಪುರ: ಇಂದು ಸಂಜೆ ನಗರದಲ್ಲಿ ಮೊಂಬತ್ತಿ ಸಭೆ ಆಯೋಜಿಸಿರುವ 'ಸಹಮತ'

Sat, 20 Feb 2010 03:18:00  Office Staff   S.O. News Service

ಕುಂದಾಪುರ: ಪುಣೆ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಮುಗ್ಧ ಜೀವಗಳಿಗೆ ಶ್ರದ್ಧಾಂಜಲಿ ಸಲ್ಲಿಸಲು ಕುಂದಾಪುರದ ’ಸಹಮತ’ ಸಂಘಟನೆ ’ಮೊಂಬತ್ತಿ ಸಭೆ’ ಯನ್ನು ಫೆ. ೨೦, ಶನಿವಾರ ಸಂಜೆ ನಗರದ ಶಾಸ್ತ್ರೀ ವೃತ್ತದಲ್ಲಿ ಹಮ್ಮಿಕೊಂಡಿದೆ.

 

ಉಪನ್ಯಾಸಕ ಜಯಪ್ರಕಾಶ ಶೆಟ್ಟಿ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಬಾಂಬ್ ಸ್ಫೋಟದ ಸಂತ್ರಸ್ತರಿಗೆ ಮೊಂಬತ್ತಿ ಬೆಳಗಿ ಕಂಬನಿ ಮಿಡಿಯಲಾಗುವುದು. ಭಯೋತ್ಪಾದಕರ ಬರ್ಬರ ದಾಳಿಗಳನ್ನು ಖಂಡಿಸುವ ಸಲುವಾಗಿ ಆಯೋಜಿಸಿರುವ ಈ ಸಭೆಯಲ್ಲಿ ಕುಂದಾಪುರ ಪರಿಸರದಲ್ಲಿ ಇತ್ತೀಚೆಗೆ ನಡೆದಿರುವ ಮತೀಯವಾದದ ಹಿಂಸೆಯನ್ನು ಸಹ ಖಂಡಿಸಲಾಗುವುದು. ಶಾಂತಿಪ್ರಿಯ ನಾಗರಿಕರು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ’ಸಹಮತ’ ಸಂಘಟನೆ ಪ್ರಕಟಣೆಯಲ್ಲಿ ವಿನಂತಿಸಿದೆ.

 

 


Share: