ಮಂಜೇಶ್ವರ ಜನವರಿ 18: ಕಾಸರಗೋಡು ಮಲಬಾರ್ ಗೋಲ್ಡ್‌ನಿಂದ ನಕಲಿ ಕ್ರೆಡಿಟ್ ಕಾರ್ಡ್ ಬಳಸಿ ಚಿನ್ನಾಭರಣ ದರೋಡೆಗೆಯ್ಯಲು ಯತ್ನಿಸಿದ ಪ್ರಕರಣದ ಆರೋಪಿಯನ್ನು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ರೀತಿಯಲ್ಲಿ ಪತ್ತೆಯಾಗಿದೆ. ಕುಂಬಳೆ ನಾಯಿಕಾಪಿನ ನಾಣು ಎಂಬವರ ಪುತ್ರ ರಮೇಶ್ ಕುಮಾರ್(32) ನೇಣುಬಿಗಿದ ವೆಕ್ತಿ.
ಇಂದು ಸಂಜೆ ವೇಳೆಗೆ ಮನೆಯೊಳಗೆ ನೇಣು ಬಿಗಿದ ಈತನನ್ನು ಮನೆಯವರು ಕುಂಬಳೆ ಸಹಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು ಸಂಭವಿಸಿದೆ. ಈತ ಒಂದು ವರ್ಷಗಳ ಹಿಂದೆ ನಕಲಿ ಕ್ರೆಡಿಟ್ ಕಾರ್ಡ್ ಬಳಸಿ ಕಾಸರಗೋಡು ಮಲಬಾರ್ ಗೋಲ್ಡ್‌ನಿಂದ ಚಿನ್ನಾಭರಣ ದರೋಡೆಗೈಯ್ಯಲು ಯತ್ನಿಸಿದ್ದರು.
ಆರಿಫ್ ಮಚ್ಚಂಪಾಡಿ, ಮಂಜೇಶ್ವರ