ಬೈಂದೂರು: ಉಪ್ಪುಂದ ಸಮೀಪ ಮಳೆಗಾಲದ ಸಾಂಪ್ರದಾಯಿಕ ಪಟ್ಟೆ ಬಲೆ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಸಾವನ್ನಪ್ಪಿ ಇನ್ನೋರ್ವನ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ ಘಟನೆ ಸಂಭವಿಸಿದೆ.
ನಾಗೇಶ್ (29) ಮೃತಪಟ್ಟ ದುರ್ದೈವಿ. ಸತೀಶ್ (31) ಎಂಬಾತ ನೀರುಪಾಲಾಗಿದ್ದು ಶೋಧ ನಡೆಸಲಾಗಿದೆ. ಸಚಿನ್ ಎಂಬುವರ ಮಾಲಿಕತ್ವದ ದೋಣಿಯು ಅಲೆಗಳ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಕಡಲು ಪಾಲಾದ ಮೀನುಗಾರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ದೋಣಿಯಲ್ಲಿ ಒಟ್ಟು 8 ಮಂದಿ ಇದ್ದರು. ಉಳಿದ ನಾಲ್ವರು ಈಜಿ ದಡ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗಡೆ, ಬೈಂದೂರು ಸರ್ಕಲ್ ಇನ್ಸಪೆಕ್ಟರ್ ಸಂತೋಷ್ ಕಾಯ್ಕಿಣಿ, ಬೈಂದೂರ್ ಪೊಲೀಸರು ಮತ್ತು ಅಗ್ನಿಶಾಮಕ ದಳ, ಕೋಸ್ಟಲ್ ಗಾರ್ಡ್ , ಮೀನುಗಾರಿಕಾ ಸಹಾಯಕ ನಿರ್ದೇಶಕರು ಕುಂದಾಪುರ ಸುಮಲತಾ , ಮುಳುಗುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ , ಬೈಂದೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ್ ಖಾರ್ವಿ ಉಪ್ಪುಂದ ಮುಂತಾದವರು ನೆರೆದಿದ್ದಾರೆ. ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.