ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ವಿಟ್ಲ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಿಳಾ ಘಟಕ ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ವಿಟ್ಲ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಹಿಳಾ ಘಟಕ ನ್ಯಾಷನಲ್ ವಿಮೆನ್ಸ್ ಫ್ರಂಟ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Tue, 09 Mar 2010 18:22:00  Office Staff   S.O. News Service

ವಿಟ್ಲ: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ವಿಟ್ಲ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ನ್ಯಾಷನಲ್ ವಿಮೆನ್ಸ್ ಫ್ರಂಟ್ ಪಧಾದಿಕಾರಿಗಳು ಹಣ್ಣು ಹಂಪಲು ವಿತರಿಸುವುದರ ಜೊತೆಗೆ ಅವರ ಯೋಗಕ್ಷೇಮ ವಿಚಾರಿಸಿ ಅವರಿಗೆ ಧ್ಯೆರ್ಯ ತುಂಬುವುದರ ಮೂಲಕ ವಿಶಿಷ್ಟವಾಗಿ ಆಚರಿಸಿದರು.


nwf_3.jpg


nwf_4.jpg



nwf_1.jpg

ಆಸ್ಪತ್ರೆಗೆ ಭೇಟಿ ಕೊಟ್ಟ ಎನ್. ಡಬ್ಲ್ಯೂ. ಎಫ್ . ಪುತ್ತೂರು ಜಿಲ್ಲಾ ಕಾರ್ಯದರ್ಶಿ ಆಯಿಷಾ ಬಷೀರ್ ಹಾಜಿ ಗೋಳ್ತಮಜಲು, ವಿಟ್ಲ ಕ್ಷೇತ್ರಾಧ್ಯಕ್ಷೆ ಸುಮಯ್ಯಾ ಸಿದ್ದೀಕ್ ಅವರ ಜೊತೆ ಎನ್.ಡಬ್ಲ್ಯೂ.ಎಫ್. ನ ಹಲವಾರು ಮಹಿಳೆಯರು ಜೊತೆಗಿದ್ದರು. ಡಾ: ಪ್ರಶಾಂತ್ ಮತ್ತು ಡಾ: ಗೀತಾ ಪ್ರಕಾಶ್ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

ಬುರ್ಖಾಧಾರಿ ಮಹಿಳೆಯರ ಕುರಿತು ವಿವಾದಗಳು ಬಂದು ಆಕೆಗೆ ಬುರ್ಖಾದಲ್ಲಿ ಸ್ವಾತಂತ್ರ್ಯ ಇಲ್ಲ ಎಂದು ಬೊಬ್ಬೆ ಹೊಡೆಯುತ್ತಿರುವ ಈ ಸಂಧರ್ಭದಲ್ಲಿ ಎನ್.ಡಬ್ಲ್ಯೂ.ಎಫ್. ನ ಬುರ್ಖಾಧಾರಿ ಮಹಿಳೆಯರು ವಿಶ್ವ ಮಹಿಳಾ ದಿನಾಚರಣೆಯಂದು ಹಮ್ಮಿಕೊಂಡ ಈ ಅರ್ಥಪೂರ್ಣ ಕಾರ್ಯಕ್ರಮ ಮುಸ್ಲಿಂ ಮಹಿಳಾ ಸಬಲೀಕರಣದ ಸಂಕೇತದಂತಿತ್ತು .



ವರದಿ : ಅಶ್ರಫ್ ಮಂಜ್ರಾಬಾದ್.
ಚಿತ್ರ ಕೃಪೆ: ಕೋಸ್ಟಲ್ ಡೈಜೆಸ್ಟ್ 

Share: