ಮಂಜೇಶ್ವರ, ಜನವರಿ, ೮:ಕಣ್ಣೂರು ವಿಶ್ವ ವಿಧ್ಯಾನಿಲಯ ಮಂಜೇಶ್ವರ ಗೋವಿಂದ ಪೈ ಕಾಲೇಜು ಸಮೀಪ ಸ್ಥಾಪಿಸಲಿರುವ ವಿ.ವಿ ಕ್ಯಾಂಪಸ್‌ನ ನಿರ್ಮಾಣಕ್ಕಾಗಿ ೧ ಕೋಟಿ ರೂ ಮಂಜೂರು ಮಾಡಿದೆ. ಕಳೆದ ದಿನ ಉಪಕುಲಪತಿ ಡಾ.ಮೈಕ್ಕಿಲ್ ತರಗನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯು ಈ ಬಗ್ಗೆ ತೀರ್ಮಾಣ ಕೈಗೊಂಡಿದೆ. ೨೦೦೯ ಜನುವರಿ ೨೬ ರಂದು ವಿ.ವಿ ಕ್ಯಾಂಪಸ್ ನ ಮಂಜೇಶ್ವರ ಶಾಸಕ ಸಿ.ಎಚ್ಚ್ ಕುಞ್ಞಂಬು ಶಿಲಾನ್ಯಾಸಗೈದಿದ್ದರು. ತದ ನಂತರ ಮಂದ ಗತಿಯಲ್ಲಿ ಕಾಮಗಾರಿ ಸಾಗಿದ್ದು ಇದರ ವಿರುದ್ದ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಅಧಿಕೃತರು ಕ್ರಮ ಕೈಗೊಳ್ಳುವಂತಾಯಿತು.
ಜಬ್ಬಾರ್ ಹತ್ಯೆ ; ಯೂತ್ ಕಾಂಗೈಯಿಂದ ಉಪವಾಸ ಸತ್ಯಾಗ್ರಹ
ಮಂಜೇಶ್ವರ: ಪೆರ್ಲ ಯೂತ್ ಕಾಂಗೈ ನೇತಾರ ಅಬ್ದುಲ್ ಜಬ್ಬಾರ್ ಹತ್ಯೆ ಪ್ರಕರಣ ನೈಜ ಆರೋಪಿಗಳನ್ನು ಬಂಧಿಸಬೇಕೆಂಬ ಬೇಡಿಕೆ ಹೆಚ್ಚಾಗುತ್ತಿದ್ದು. ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ಒಪ್ಪಿಸಬೇಕೆಂದು ಆಗ್ರಹಿಸಿ ಜನುವರಿ ೮ ರಂದು ಕಣ್ನೂರು ಐ.ಜಿ ಕಛೇರಿ ಮುಂದೆ ಯೂತ್ ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಸಮಿತಿ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯಲಿದೆ. ಸತ್ಯಾಗ್ರಹವನ್ನು ಕೆ.ಪಿ.ಸಿ.ಸಿ ಕಾರ್ಯದರ್ಶಿ ಸಂಸದ ಕೆ.ಸುಧಾಕರನ್ ಉದ್ಗಾಟಿಸಲಿರುವರು. ಬ್ಲಾಕ್ ಅಧ್ಯಕ್ಷ ಕೇಶವ್ ಪ್ರಸಾದ್ ನಾಣಿಹಿತ್ಲು ಅಧ್ಯಕ್ಷತೆಯಲ್ಲಿ ನಡೆದ ಅವಲೋಕನಾ ಸಭೆಯನ್ನು ಯೂತ್ ಕಾಂಗೈ ಜಿಲ್ಲಾಧ್ಯಕ್ಷ ಹಕೀಂ ಕುನ್ನಿಲ್ ಉದ್ಗಾಟಿಸಿದರು. ಸೋಮಶೇಕರ್, ಸೈಫುಲ್ಲಾ ತಂಙಳ್, ಶಾನಿದ್ ಕಯ್ಯಾಂಕುಡೇಲ್,ಪ್ರಶಾಂತ್ ರೈ,ಗಣೇಶ್ ಬಂಡಾರಿ, ನಾಸಿರ್ ಮೊಗ್ರಾಲ್ ಮೊದಲಾದವರು ಉಪಸ್ಥಿತರಿದ್ದರು.