ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಾದರಿ ನೀತಿ ಸಂಹಿತೆ ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ತರಬೇತಿ ಕಾರ್ಯಾಗಾರ

ಮಾದರಿ ನೀತಿ ಸಂಹಿತೆ ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ತರಬೇತಿ ಕಾರ್ಯಾಗಾರ

Wed, 15 Mar 2023 04:26:05  Office Staff   SOnews

ಕಾರವಾರ: ಕೇಂದ್ರ ಚುನಾವಣೆ ಆಯೋಗವು ಈಗಾಗಲೇ ರಾಜ್ಯಕ್ಕೆ ಆಗಮಿಸಿ ಚುನಾವಣೆ ಪೂರ್ವತಯಾರಿ ಬಗ್ಗೆ ಪರಿಶೀಲನೆ ಮಾಡಿದ್ದು ಜಿಲ್ಲೆಯಲ್ಲಿ ಈ ಬಗ್ಗೆ ಅಧಿಕಾರಿಗಳು ಕೂಡಲೇ  ಸಕ್ರಿಯವಾಗಿ ಕಾರ್ಯ ಪ್ರವೃತರಾಗುವಂತೆ   ಜಿಲ್ಲಾ ಚುನಾವಣೆಅಧಿಕಾರಿ ಪ್ರಭುಲಿಂಗ ಕವಳಿಕಟ್ಟಿ  ಹೇಳಿದರು.

ನಗರದ  ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಚುನಾವಣೆ ಅಧಿಕಾರಿಗಳಿಗೆ ಹಾಗೂ ಸಹಾಯಕ ಚುನಾವಣೆ ಅಧಿಕಾರಿಗಳಿಗೆ  ಮಾದರಿ ನೀತಿ ಸಂಹಿತೆ  ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಅಧಿಕಾರಿಗಳು  ರಾಜ್ಯಕ್ಕೆ ಆಗಮಿಸಿ ಮುಂಬರುವ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದ  ಚುನಾವಣೆ ನಡಾವಳಿ, ಮತದಾನದ ವಿಧಾನ, ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಡೆಲಿಷನ್ಸ್, ರಾಜಕೀಯ ಪಕ್ಷಗಳ ದೂರುಗಳು, ರಾಜಕೀಯ ಪಕ್ಷಗಳ ಹೊಂದಾಣಿಕೆ ಮುಂತಾದವುಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ದಾಖಲೆಗಳೊಂದಿಗೆ  ವರದಿಯನ್ನು ಇಟ್ಟುಕೊಳ್ಳುವಂತೆ  ಅವಶ್ಯಕತೆ ಇದ್ದಲ್ಲಿ ಮಾಹಿತಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಎಲ್ಲಾ ಅಧಿಕಾರಿಗಳು ಸಕ್ರಿವಾಗಿ ಕಾರ್ಯನಿವಹಿಸುತ್ತಿದ್ದು ಕೇಂದ್ರಚುನಾವಣೆ ಅಧಿಕಾರಿಗಳು  ಜಿಲ್ಲೆಗೆ ಬೇಟಿ ನೀಡಿದಾಗ ಚುನಾವಣೆಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ದಾಖಲೆಗಳೊಂದಿಗೆ ಪೂರೈಸಬೇಕು ಎಂದು ಹೇಳಿದರು.

ಜಿಲ್ಲೆಯ ಚುನಾವಣೆ ಅಧಿಕಾರಿಗಳು  ಬೇರೆ ಇಲಾಖೆಯ ಅಧಿಕಾರಿಗಳೊಂದಿ ಸಮನ್ವಯ ಸಾಧಿಸಿ ಯಾವುದೇ ಗೊಂದಲವಿಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಯಾವುದೇ ಲೋಪ ದೋಷಗಳಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರಿ ನೇರ ಹೊಣೆಗಾರರಾಗುತ್ತಾರೆ. ಅಂತಹ ಲೋಪ ದೋಷಗಳು ಕಂಡು ಬಂದಲ್ಲಿ  ಅಥವಾ ಗೊಂದಲ ಉಂಟಾದರೆ ಸಂಬಂಧಿಸಿದ ಅಧಿಕಾರಿಗಳ  ಗಮನಕ್ಕೆ ತರಬೇಕು. ಹಾಗೆಯೇ ಸ್ವೀಪ್ ಚಟುವಟಿಕೆಗಳನ್ನು  ಪರಿಣಾಮಕಾರಿಯಾಗಿ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಮಾದಕ ವಸ್ತುಗಳ ತಡೆಗೆ ಚೆಕ್ ಪೋಸ್ಟ್ ಗಳಲ್ಲಿ  ಬಿಗಿ ಬಂದೋಬಸ್ತ್ ಕೈಗೊಳ್ಳಬೇಕು ಹಾಗೂ ಸಿಸಿ ಕ್ಯಾಮರಗಳನ್ನು  ಅಳವಡಿಸಿ ಇಂತವುಗಳನ್ನು ತಡೆಗಟ್ಟಲ್ಲೂ  ಅಗತ್ಯ ಕ್ರಮ ವಹಿಸಬೇಕು.  ಹಾಗೆಯೇ ಕೋಸ್ಟ್ ಗೌರ್ಡ್, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್ ಹಾಗೂ ನೇವಿ ಅವರೊಂದಿಗೆ ಸಭೆ ಕರೆದು ಈ ಬಗ್ಗೆ ಕ್ರಮ ವಹಿಸಲು  ಸೂಚಿಸಿದರು.

ವಲಯ ಅಧಿಕಾರಿಗಳು  ಬೂತ್ ಭೇಟಿಗಳ ಬಗ್ಗೆ ಮಾಹಿತಿ ಇಟ್ಟುಕೊಳ್ಳಬೇಕು. ಮತದಾನ  ಸಂದರ್ಭದಲ್ಲಿ ಜನಸಂದನಿಯನ್ನು  ತಡೆಗಟ್ಟಲ್ಲೂ  ಯೋಜನೆಯನ್ನು ರೂಪಿಸಿ ಜನಸಂದನಿಯನ್ನು ತಡೆಗಟ್ಟಲ್ಲು ಕ್ರಮ ವಹಿಸಬೇಕು. ಚುನಾವಣೆಯು ಬೇಸಿಗೆ ಕಾಲದಲ್ಲಿ ಇರುವುದರಿಂದ  ಮತದಾನ ಸಂದರ್ಭದಲ್ಲಿ ಯಾವ ಕ್ಷೇತ್ರದಲ್ಲಿ  ನೆರಳಿನ ವ್ಯವಸ್ಥೆ ಇಲ್ಲವೋ ಅಲ್ಲಿ ನೆರಳಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಹಿರಿಯ ನಾಗರಿಕರು, ಯುವಕರು ಹಾಗೂ ಮಹಿಳೆಯರು  ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಕ್ರಮ ವಹಿಸಬೇಕು   ಎಂದರು.

 

ಬಳಿಕ  ಅಪರ ಜಿಲ್ಲಾಧಿಕಾರಿ ರಾಜು ಮೊಗವಿರ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ  ಚುನಾವಣೆ ಸಂಬಂಧಿಸಿದ ತರಬೇತಿ ನೀಡಿರು. ಈಗಾಗಲೇ   ಚುನಾವಣೆ ಅಧಿಕಾರಿಗಳಿಗೆ ಮತ್ತು  ಸಹಾಯಕ ಚುನಾವಣೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದರು. ಚುನಾವಣೆಯಲ್ಲಿ ಚುನಾವಣೆ ಅಧಿಕಾರಿ ಮತ್ತು ಸಹಾಯ ಚುನಾವಣೆ ಅಧಿಕಾರಿಗಳ ಪಾತ್ರ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು  ಹಾಗೂ ರಾಜಕೀಯ ಪಕ್ಷದ ನಾಯಕರು  ನಾಮಿನೆಷನ್ ಮಾಡುವಂತ  ಸಂದರ್ಭದಲ್ಲಿ ಯಾವೆಲ್ಲ ಕ್ರಮ ಅನುಸರಿಸಬೇಕು ಮತ್ತು ಮಾದರಿ ನೀತಿ ಸಂಹಿತೆಯಲ್ಲಿ  ಹೇಗೆ ಕಾರ್ಯನಿರ್ವಹಿಸಬೇಕು ಎಂಬುವುದನ್ನು ತರಬೇತಿಯಲ್ಲಿ  ತಿಳಿಸಿಕೊಟ್ಟರು.

 

ಕಾರ್ಯಾಗಾರದಲ್ಲಿ ಉಪ ವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ್, ಕುಮಟಾ ಉಪ ವಿಭಾಗಧಿಕಾರಿ ರಾಘವೇಂದ್ರ ಜಗಲಾಸರ್, ಶಿರಸಿ ಉಪ ವಿಭಾಗಧಿಕಾರಿ ದೇವರಾಜ, ಯೋಜನಾ ಅಧಿಕಾರಿಗಳು ಸ್ಟೇಲ್ಲಾ ವರ್ಗಿಸ್, ಸಮಾಜ ಕಲ್ಯಾಣ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ ಹಾಗೂ ಜಿಲ್ಲಾ ಮತ್ತು ತಾಲೂಕ ಮಟ್ಟದ  ಅಧಿಕಾರಿಗಳು  ಉಪಸ್ಥಿತರಿದ್ದರು.


Share: