ಭಟ್ಕಳ: 2020-21ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಬಿಎ, ಬಿಎಸ್ಸಿ ಮತ್ತು ಬಿಕಾಂ ಸೆಮಿಸ್ಟರ್ ಪರೀಕ್ಷೆಯಲ್ಲಿ ಅಂಜುಮನ್ ಮಹಿಳಾ ಕಾಲೇಜಿನ ಐವರು ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ರ್ಯಾಂಕ್ ಪಡೆದು ಕಾಲೇಜಿಗೆ ಮೈಲುಗಲ್ಲು ತಂದಿದ್ದಾರೆ.
ಈ ಬಗ್ಗೆ ಕಾಲೇಜು ಪ್ರಾಂಶುಪಾಲರು ಶ್ರೀಮತಿ ರೈಸಾ ಶೇಖ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ): ಫಾತಿಮಾ ಸಿದ್ರಾ ಜಿಯಾವುದ್ದೀನ್ ಅಹ್ಮದ್ ದಮ್ದಾ ಅಬು 90.13 ಶೇ. ಫಲಿತಾಂಶ ಪಡೆದುಕೊಂಡಿದ್ದು ಒಟ್ಟು 3120 ಅಂಕಗಳಿಗೆ 2812 ಅಂಕಗಳನ್ನು ಗಳಿಸಿದ್ದಾರೆ. ವಿಶ್ವವಿದ್ಯಾನಿಲಯದಲ್ಲಿ ಎರಡನೇ ರ್ಯಾಂಕ್ ಗಳಿಸಿದ್ದಾರೆ.
ಬ್ಯಾಚುಲರ್ ಆಫ್ ಸೈನ್ಸ್ನಲ್ಲಿ (ಬಿಎಸ್ಸಿ): ನಮೀನ್ ಖಾನಮ್ ಅಜೀಜ್ ಅಹ್ಮದ್ ಪಠಾಣ್ ಅವರು ವಿವಿಗೆ ಮೊದಲ ರ್ಯಾಂಕ್ ಪಡೆದಿದ್ದಾರೆ. ಒಟ್ಟು 3280 ಅಂಕಗಳಲ್ಲಿ 3091 ಅಂಕ ಪಡೆದು ಶೇಕಡಾ 94.24 ಫಲಿತಾಂಶ ಗಳಿಸಿದ್ದಾರೆ.
ಆಯಿಷಾ ಫತಾನಾ ಮಹಮ್ಮದ್ ಜಾಫರ್ 90.37 ಶೇ. ಫಲಿತಾಂಶದೊಂದಿಗೆ 2964 ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ. ಸೈಹಾ ಮೊಹಮ್ಮದ್ ಸಿರಾಜ್ ಶಿಂಗೇರಿ 2900 ಅಂಕ ಗಳಿಸಿ ಶೇ. 88.41 ಫಲಿತಾಂಶದೊಂದಿಗೆ ವಿಶ್ವವಿದ್ಯಾಲಯದಲ್ಲಿ ಒಂಬತ್ತನೇ ರ್ಯಾಂಕ್ ಗಳಿಸಿದ್ದಾರೆ.
ಬ್ಯಾಚುಲರ್ ಆಫ್ ಕಾಮರ್ಸ್ನಲ್ಲಿ (ಬಿಕಾಂ): ಉಫೈರಾ ಸನೋಬರ್ ಸೈಯದ್ ಅಬ್ದುಲ್ ಖಾದಿರ್ 3360 ಕ್ಕೆ 2060 ಅಂಕ ಪಡೆದು ಶೇ. 91.07 ಗಳಿಸಿ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ.
ವಿದ್ಯಾರ್ಥಿಗಳ ತಮ್ಮ ಅಸಾಧಾರಣ ಸಾಧನೆಯಿಂದ ಇಡೀ ಕಾಲೇಜಿಗೆ ಮಾತ್ರವಲ್ಲದೆ ಇಡೀ ಉತ್ತರ ಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಂಜುಮನ್ ಕಾಲೇಜು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರದಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದೆ.
ಪ್ರಾಂಶುಪಾಲರು ಉಪನ್ಯಾಸಕರ ಅದ್ಭುತ ಬೋಧನೆ ಮತ್ತು ನಿರಂತರ ಮಾರ್ಗದರ್ಶನಕ್ಕಾಗಿ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಂಜುಮನ್ ಹಮೀ ಇ ಮುಸ್ಲಿಮೀನ್ ಸಂಸ್ಥೆಯ ಆಡಳಿತ ಮಂಡಳಿ, ಕಾಲೇಜು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿ ಅವರ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.