ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಡುಪಿ: ಸಮಾಜ ಸುಧಾರಣೆಯಲ್ಲಿ ಯುವತಿಯರ ಪಾತ್ರ - ಉಡುಪಿ ಜಿಲ್ಲಾ ಸಮಾವೇಶ

ಉಡುಪಿ: ಸಮಾಜ ಸುಧಾರಣೆಯಲ್ಲಿ ಯುವತಿಯರ ಪಾತ್ರ - ಉಡುಪಿ ಜಿಲ್ಲಾ ಸಮಾವೇಶ

Sat, 16 Jan 2010 18:18:00  Office Staff   S.O. News Service
ಉಡುಪಿ,ಜನವರಿ, 16: ಗರ್ಲ್ಸ್ ಇಸ್ಲಾಮಿಕ್ ಆರ್ಗೆನೈಶನ್ ಉಡುಪಿ ಇವರ ವತಿಯಿಂದ ಸಮಾಜಸುಧಾರಣೆಯಲ್ಲಿ ಯುವತಿಯವರ ಪಾತ್ರ ಈ ವಿಷಯದಲ್ಲಿ ಉಡುಪಿ ಜಿಲ್ಲಾ ಸಮಾವೇಶ ಜನವರಿ 14 ಗುರುವಾರ ಹೊಟೇಲ್ ಕಿದಿಯೂರ್‌ನಲ್ಲಿ ಜರಗಿತು.ನಮ್ಮ ಸಮಾಜದಲ್ಲಿ ಮದುವೆ ಎಂಬುದು ಒಂದು ಸಮಾಜಿಕ ಪಿಡುಗಾಗಿದೆ. ಆದ್ದರಿಂದ ಮದುವೆಗೆ ಅನ್ಯ ಸಂಸ್ಕೃತಿಯನ್ನುಅನುಸರಿಸದೇ ಇಸ್ಲಾಮಿ ರೀತಿಯಲ್ಲಿ ನಡೆಯಬೇಕಾಗಿದೆ. ನಮ್ಮ ಹಿಜಾಬ್ ಅದು ಒಂದು ಪ್ಯಾಶನ್ ಬಿಂದು ಆಗಿರಬಾರದು.ವಿದೇಶಿ ಮಹಿಳೆಯರ ಸ್ವಾತಂತ್ರದ ನಿಟ್ಟಿನಲ್ಲಿ ನಗ್ನತೆಯನ್ನು ತೋರಿಸುತ್ತಾ ತಮ್ಮ ಬಾಳನ್ನು ತ್ಯಜಿಸುತ್ತಿದ್ದಾರೆ. ಇದರ ಪರಿಣಾಮ ನಮ್ಮ ದೇಶದಲ್ಲೂ ನಾವು ಕಾಣುತ್ತಿದ್ದೇವೆ. ಆದರೆ ನಮ್ಮ ಧರ್ಮವನ್ನು ಸರಿಯಾಗಿ ಅರ್ಥಮಾಡಿಕೊಂಡು ನಾವು ಈ ಎಲ್ಲಾ ಕೆಟ್ಟ ಸಂಸ್ಕೃತಿಯನ್ನು ತಡೆಗಟ್ಟಿಸಬೇಕಾಗಿದೆ. ಮೊದಲಿಗೆ ನಮ್ಮನ್ನು ಸುಧಾರಿಸಿಕೊಂಡು ನಂತರ ಬೇರೆಯವರನ್ನು ಸತ್ಯದ ಮಾರ್ಗಕ್ಕೆ ಕರೆಯ ಬೇಕು. ಎಂದು ಮಾಜಿ ಜಿ.ಐ.ಒ. ಪ್ರಧಾನ ಕಾರ್ಯದರ್ಶಿ ಕರ್ನಾಟಕ ಮತ್ತು ಗೋವಾ ಖದೀಜ ಹುದಾ ಮಲ್ಪೆ ಯವರು ಕಾರ್ಯಕ್ರಮದ ಮುಖ್ಯ ಅದ್ಯಕ್ಷೀಯ ಭಾಷಣದಲ್ಲಿ ಹೇಳಿದರು. ಜಿ.ಐ.ಒ.ನ ಉದ್ದೇಶ ಯುವತಿಯರಲ್ಲಿ ಸಮಾಜದ ಕೆಡುಕನ್ನು ತೊರೆದು ಉತ್ತಮ ರೀತಿಯಲ್ಲಿ ಬಾಳನ್ನು ಬೆಳಗಿಸುವುದಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಅತಿಥಿಯಾದ ಬಾಸಮಾ ಖಾತೂನ್ ಕಾರ್ಕಳ (ವೈದ್ಯಕೀಯ ವಿದ್ಯಾರ್ಥಿನಿ, ಕೆ.ಎಮ್.ಸಿ,) ಮಾತನಾಡುತ್ತಾ ಅಲ್ಲಾಹನು ಒಂದೇ ಆತ್ಮದಿಂದ ಪುರುಷ ಮಹಿಳೆಯರನ್ನು ಸೃಷ್ಟಿಸಿದ. ಇಸ್ಲಾಮೀನಲ್ಲಿ ಇಬ್ಬರಿಗೂ ಸಮಾನವಾದ ಸ್ಥಾನಮಾನವಿದೆ. ಇಸ್ಲಾಮೀ ಸಮಾಜವು ಸುಂದರ ಕಟ್ಟಡ ನಿರ್ಮಾಣಕ್ಕೆ ಮಹಿಳೆ ಪುರುಷರಿಬ್ಬರ ಪಾತ್ರ ಅತೀ ಮಹತ್ವವಾಗಿದೆ ಎಂದು ಹೇಳಿದರು. ಸಾಮಾನ್ಯವಾಗಿ ಇಸ್ಮಾಮಿನಲ್ಲಿ ಹೆಂಗಸರು ಅಡಿಗೆ, ಮೆಹಂದಿ ಬಿಟ್ಟರೆ ಬೇರೆ ವಿಷಯಗಳಲ್ಲಿ ಕಲಿಯಲು ಆಸಕ್ತಿ ತೋರಿಸುತ್ತಾರೆ.

ಆದರೆ ಮಹಿಳೆ ಶಿಕ್ಷಣದ ಪ್ರತಿ ರಂಗದಲ್ಲೂ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಆಕೆಯ ಸಮಾಜದಲ್ಲಿ ಸ್ಥಾನಮಾನ ಹೆಚ್ಚುವುದಲ್ಲದೆ ಇಸ್ಲಾಂಅನ್ನು ಸರಿಯಾಗಿ, ಹೆಚ್ಚು ಪರಿಪೂರ್ಣವಾಗಿ ತಿಳಿಯಲು ಸಾಧ್ಯ ಎಂದು ಹೇಳಿದರು. ಅಲ್ಲದೆ, ಮಹಿಳೆಯು ಯಾವ ರೀತಿ ಸಮಾಜ ಸುಧಾರಿಸಬಲ್ಲಳು ಎಂಬುದನ್ನು ವಿವರಿಸುತ್ತಾ ಮಹಿಳೆಯರು ನಿತ್ಯ ಜೀವನದಲ್ಲಿ ಹಣದ ಮಿತವ್ಯಯ ಮಾಡಿ, ಸಂಗ್ರಹಿಸಿದ ಹಣವನ್ನು ಬಡವರ ಉದ್ಧಾರಕ್ಕೆ ವಿನಿಯೋಗಿಸಬೇಕು ಎಂದು ಕರೆಯನ್ನು ನೀಡಿದರು ಇನ್ನೋರ್ವ ಅತಿಥಿ, ಸುಹೇನ ಫಾತಿಮಾ (ಜಿ.ಐ.ಒ. ಸಹ ಸದಸ್ಯೆ, ಮಲ್ಪೆ ಘಟಕ) ಮಾತನಾಡುತ್ತಾ ಒಬ್ಬ ಮಹಿಳೆ ತನ್ನ ವರ್ತನೆಯ ಮೂಲಕ ಕುಟುಂಬ ಮತ್ತು ಸಮಾಜವನ್ನು ಬೆಳಗಿಸಲೂ ಬಳ್ಳಲು. ಅಥವಾ ಕುಟುಂಬ ಮತ್ತು ಸಮಾಜದಲ್ಲಿ ಅಂಧಕಾರವನ್ನೂ ಉಂಟು ಮಾಡಲೂ ಬಳ್ಳಲು. ಮಹಿಳೆಗೆ ಇಸ್ಲಾಂ ನೀಡಿದ ಸ್ಥಾನಮಾನವನ್ನು ವರ್ಣಿಸುತ್ತಾ ಆಕೆ, ಸಮಾಜದಲ್ಲಿ ಮಗಳು, ಪತ್ನಿ, ತಾಯಿಯಾಗಿ ಯಾವ ರೀತಿ ತನುಮನಧನದಿಂದ ಸಮಾಜ ಸುಧಾರಿಸಬಲ್ಲಳು ಎಂಬುದನ್ನು ಮನನಗೊಳಿಸಿದರು.

ಇನ್ನೋರ್ವ ಅತಿಥಿ ಮಲಿಕಾ ಉಲ್ಪತ್ (ಜಿ.ಐ.ಒ. ಅಧ್ಯಕ್ಷೆ, ಉಡುಪಿ ಘಟಕ) ಮಾತನಾಡುತ್ತಾ, ಮದುವೆ ಎಂಬುದು ಸುಂದರ ಸಮಾಜದ ಕೇಂದ್ರ ಬಿಂದುವಾಗಿದೆ ಎಂದರು. ಒಂದು ಪತ್ನಿಯಾಗಿ ತನ್ನ ಪತಿಯನ್ನು ಅರ್ಥಮಾಡಿಕೊಂಡು ತನ್ನ ಕುಟುಂಬವನ್ನು ಸರಿಪಡಿಸಿದರೆ ಆ ಕುಟುಂಬವು ಜೀವನಪರ್ಯಂತ ಸಂತೋಷದಿಂದ ಇದ್ದರೆ ಸಮಾಜವೂ ಉತ್ತಮ ರೀತಿಯಲ್ಲಿ ಇರುತ್ತದೆ. ಇಸ್ಲಾಮಿನ ಪರಿಚಯ ಸರಿಯಾದ ರೀತಿಯಲ್ಲಿ ಸಮಾಜದಲ್ಲಿ ಆಗಲಿಲ್ಲ, ಮಹಿಳೆಯರು ಸಂದೇಶ ಪ್ರಚಾರದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು. ಒಬ್ಬ ಮಹಿಳೆಗೆ ವಿದ್ಯೆ ನೀಡಿದರೆ ಇಡೀ ಸಮಾಜಕ್ಕೆ ವಿದ್ಯೆ ನೀಡಿದಂತೆ. ನಮ್ಮ ಕಾರ್‍ಯದಲ್ಲಿ ಅಡೆಚಣೆಗಳನ್ನು ತರುವವರನ್ನು ತಡೆಗಟ್ಟುತ್ತಾ ನಾವು ನಮ್ಮ ಗುರಿಯನ್ನು ಮುಂದಿಟ್ಟುಕೊಂಡು ಸಾಗಬೇಕು. ಇಸ್ಲಾಮೀ ವಿರೋಧಿಗಳು ಹಿಜಾಬನ್ನು ತಪ್ಪು ರೀತಿಯಲ್ಲಿ ಅರ್ಥೈಸಿ ಹಿಜಾಬ್ ಧರಿಸಿದವರನ್ನು ಮನೆಯ ನಾಲ್ಕು ಗೋಡೆಯ ಮಧ್ಯೆ ಕೂಡಿ ಹಾಕಿದ್ದಾರೆ. ಆದರೆ ಹಿಜಾಬ್ ಮಹಿಳೆಯ ಸೌಂದರಯ್ಯ ಹಾಗೂ ಮಾನವ ರಕ್ಷಣೆ ಮಾಡಿ ಆಕೆಯನ್ನು ಸಮಾಜದ ಎಲ್ಲಾ ರಂಗಗಳಲ್ಲಿಯೂ ಪುರುಷನಿಗೆ ಸರಿಸಮಾನ ಸ್ಥಾನ ನೀಡಿದೆ.

ಕುಮಾರಿ ಆಫ್ರೀನ್ ಬಾನು ಜಿ.ಐ.ಒ. ಆದಿ‌ಉಡುಪಿ ಆರಂಭದಲ್ಲಿ ಕುರಾನ್ ಪಠಿಸಿದರು. ತಸ್ಮಿಯಾ ತುಲ್ ಸಾಲಿಹಾ (ಮಲ್ಪೆ ಘಟಕದ ಅಧ್ಯಕ್ಷೆ)ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಆಸಿಯಾ ಶರೀಫ್ (ಜಮಾ‌ಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗ) ಹಾಗೂ ಸಮೀನಾ ಶಕೂರ್ (ಉಡುಪಿ ಜಿಲ್ಲಾ ಸಂಚಾಲಕಿ ಜಮಾ‌ಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗ) ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಬಿಹಾ ಅಸಾದಿ (ಜಿ.ಐ.ಒ. ಸೆಕ್ರೆಟರಿ, ಉಡುಪಿ ಘಟಕ) ರವರು ಮಾಡಿದರು.  ಕುಮಾರಿ ಸುಹಾನ ಜಿ.ಐ.ಒ. ಕುಕ್ಕಿಕಟ್ಟೆ ಧನ್ಯವಾದ ಅರ್ಪಿಸಿದರು.


Share: