ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಹಿಳಾ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ಶಿರಸಿಯಲ್ಲಿ ಏಕವ್ಯಕ್ತಿ ಪ್ರತಿಭಟನೆ

ಮಹಿಳಾ ಕುಸ್ತಿಪಟುಗಳ ಹೋರಾಟ ಬೆಂಬಲಿಸಿ ಶಿರಸಿಯಲ್ಲಿ ಏಕವ್ಯಕ್ತಿ ಪ್ರತಿಭಟನೆ

Wed, 31 May 2023 03:28:23  Office Staff   SO News

ಶಿರಸಿ :  ಮಹಿಳಾ ಕುಸ್ತಿಪಟುಗಳು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಶಿರಸಿಯಲ್ಲಿ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

  ಲೈಂಗಿಕ ದೌರ್ಜನ್ಯ ವಿರುದ್ಧ ಕ್ರೀಡಾಪಟುಗಳು ಪ್ರತಿಭಟನ ನಡೆಸುತ್ತಿದ್ದು,  ಪೊಲೀಸರು ನಡೆಸಿಕೊಂಡ ಧೋರಣೆಗೆ  ಶಿರಸಿಯ ಹಿತೇಂದ್ರ ನಾಯ್ಕ ಎಂಬುವವರು ಪ್ರತಿಭಟನೆ ನಡೆಸಿದ್ದಾರೆ.

ಶಿರಸಿ ನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ಕುಳಿತು ಕೇಂದ್ರ ಸರ್ಕಾರದ ನಡೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.


Share: