ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಹಾರಾಷ್ಟ್ರ: ಕರ್ನಾಟಕದ ಬಸ್‌ಗೆ ಕಲ್ಲು ತೂರಾಟ

ಮಹಾರಾಷ್ಟ್ರ: ಕರ್ನಾಟಕದ ಬಸ್‌ಗೆ ಕಲ್ಲು ತೂರಾಟ

Sun, 27 Nov 2022 17:06:39  Office Staff   Vb

ಮುಂಬೈ: ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಗಡಿ ವಿವಾದ ಉಲ್ಬಣಗೊಂಡಿದ್ದು, ಜಿಲ್ಲೆಯ ಮೀರಜ್‌ನಲ್ಲಿ ಕರ್ನಾಟಕಕ್ಕೆ ಸೇರಿದ ಬಸ್‌ಗೆ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.

ಸಾಂಗ್ಲಿ ಪುಣೆಯಿಂದ ಬೆಳಗಾವಿ ಜಿಲ್ಲೆಯ ಅಥಣಿಗೆ ತೆರಳುತ್ತಿದ್ದ ಕರ್ನಾಟಕದ ಬಸ್‌ಗೆ ದುಷ್ಕರ್ಮಿಗಳು ಕಲ್ಲು ಎಸೆದ ಪರಿಣಾಮ ಕಿಟಕಿ ಗಾಜುಗಳಿಗೆ ಹಾನಿ ಉಂಟಾಗಿದೆ. ಈ ಬಸ್ ಬೆಳಗಾವಿಯ ಅಥಣಿ ಡಿಪೋಗೆ ಸೇರಿದೆ.

ಘಟನೆ ಹಿನ್ನೆಲೆಯಲ್ಲಿ ಕಾಗವಾಡ-ಮಿರಾಜ್ ನಡುವಿನ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಬೆಳಗಾವಿ ಪೊಲೀಸರ ನಿರ್ದೇಶನದಂತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.


Share: