ಕಾರವಾರ : ಕಳೆದ ಎರಡು ದಿನಗಳಿಂದ ಉತ್ತರಕನ್ನಡ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು ಸೂಕ್ತ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನ್ಯಾಯಾಲಯ ಸಭಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ಮನಗೊಂಡು ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಎಚ್ಚರಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಪ್ರವಾಸ ಕೈಕೊಂಡಿದ್ದು ಮಳೆಯಿಂದ ಆದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ್ದು ಕಳೆದ ವರ್ಷ ಯಲ್ಲಾಪುರ ತಾಲೂಕಿನಲ್ಲಿ ಆರಬೈಲ್ ಭೂಕುಸಿತ ಪ್ರದೇಶವನ್ನು ಹಾಗೂ ಕಳೆದ ವಾರ ಮಳೆಯಿಂದ ಜಿಲ್ಲೆಯಲ್ಲಿ 3 ಸಾವು ನೋವುಗಳಾಗಿದ್ದು ಅದರಲ್ಲಿ ಬೆಟ್ಕುಳಿ ಗ್ರಾಮದ ಗದ್ದೆಯಲ್ಲಿ ನೀರು ಹಾಯಿಸಲು ಹೋಗಿ ಇಬ್ಬರು ದುರ್ಮರಣಕ್ಕೆ ಈಡಾಗಿದ್ದಾರೆ. ಸಾವಿಗಿಡಾದ ವ್ಯಕ್ತಿಗಳ ಮನೆಗಳಿಗೆ ಇಂದು ಭೇಟಿ ನೀಡಿ ಮೃತರಾದ ಸತೀಶ್ ಪಾಂಡುರಂಗ ನಾಯ್ಕ ಹಾಗೂ ಉಲ್ಲಾಸ ಗಾವಡಿ ರವರ ಮನೆಗೆ ಭೇಟಿಕೋಟ್ಟು ಸರ್ಕಾರದಿಂದ 5 ಲಕ್ಷ ರೂ ಪರಿಹಾರವನ್ನು ನೀಡಲಾಗಿದೆ ಹಾಗೂ ಮಳೆಯಿಂದ ಮನೆ ಕಳೆದು ಕೊಂಡ ನಿರಾಶ್ರಿತರಿಗೆ ಶೀಘ್ರವೆ 1 ಲಕ್ಷ 30 ಸಾವಿರ ರೂ ಪರಿಹಾರ ನೀಡಲಾಗುವುದು ಹಾಗೂ ಅವರುಗಳಿಗೆ ಸರ್ಕಾರದಿಂದ ಮನೆ ಕಟ್ಟಿಕೊಳ್ಳಲು ನೆರವು ನೀಡಲಾಗುವುದು ಹಾಗೂ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮವಹಿಸಲು ಸೂಚಿಸಿದರು.
ಮಳೆಯೂ ಹೀಗೆ ಮುಂದುವರೆದಲ್ಲಿ ಪ್ರವಾಹದಂತ ಸಮಸ್ಯೆಗಳನ್ನು ಪರಿಹರಿಸಲು ಏನ್‌ಡಿಆರ್‌ಫ್ ಮತ್ತು ಎಸ್ ಡಿ ಆರ್‌ಫ್ ತುಕಡಿಗಳನ್ನು ನಿಯೋಜಿಸಿ ಸೂಕ್ತ ಮುಂಜಾಗ್ರತೆ ವಹಿಸಲು ಸರ್ಕಾರ ಸಿದ್ದವಿರುವುದಾಗಿ ತಿಳಿಸಿದರು.
ಈಗಾಗಲೇ ಜಿಲ್ಲೆಯಲ್ಲಿ ಅವಶ್ಯಕತೆ ಇದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರಿದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು ಅಂತಹ ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಪೂರೈಸಿ ಯಾವುದೇ ತೊಂದರೆಗಳು ನಿರಾಶ್ರಿತರಿಗೆ ಆಗದ ರೀತಿಯಲ್ಲಿ ಅದಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ ಮಳೆ ಪ್ರಮಾಣವನ್ನು ನೋಡಿಕೊಂಡು ಕೇಂದ್ರದಿಂದ 4 ಹಾಗೂ ರಾಜ್ಯದಿಂದ 5 ಏನ್‌ಡಿಆರ್‌ಫ್ ಮತ್ತು ಎಸ್‌ಡಿಆರ್‌ಫ್ ತುಕುಡಿಗಳನ್ನು ನಿಯೋಜಿಸಲು ಕ್ರಮವಹಿಸಲು ಈಗಾಗಲೇ ನಿರ್ದೇಶನ ನೀಡಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ, ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ ಕಾಂದೂ, ಪ್ರೊಬೆಷನರಿ ಐ ಎ ಎಸ್ ಅಧಿಕಾರಿ ಜುಬಿನ್ ಮಹೋಪಾತ್ರ ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.