ಭಟ್ಕಳ: ಕಳೆದ ಜೂ.5ರಂದು ಬೆಳಿಗ್ಗೆ ಮನೆಯಿಂದ ಹೊರಗೆ ತೆರಳಿದ್ದ ಯುವತಿಯೋರ್ವಳು ಮಾನೆಗೆ ವಾಪಸ್ಸಾಗದೇ ನಾಪತ್ತೆಯಾಗಿರುವ ಘಟನೆ ತಾಲೂಕಿನ ಮುಂಡಳ್ಳಿ ಮೊಗೇರ ಕೇರಿಯಲ್ಲಿ ನಡೆದಿದೆ.
ಸರಿಸುಮಾರು 20 ವರ್ಷ ಪ್ರಾಯದ ಈ ಯುವತಿಯು ಕಳೆದ ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಸೂಪರ್ ಮಾರ್ಕೆಟ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಜೂನ್ 3 ರಂದು ಊರಿಗೆ ಹಿಂದಿರುಗಿದ್ದಳು. ಕಳೆದ ಒಂದು ವಾರದಿಂದ ಕುಟುಂಬ ಸದಸ್ಯರು ಹುಡುಕಾಟ ನಡೆಸಿದರಾದರೂ ಆಕೆ ಪತ್ತೆಯಾಗದ ಕಾರಣ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪಿ.ಎಸೈ ಭರತ ಕುಮಾರ ವಿ,ತನಿಖೆ ಕೈಗೊಂಡಿದ್ದಾರೆ.