ಭಟ್ಕಳ, ಜನವರಿ 5:ಸಮಗ್ರ ಮಕ್ಕಳ ಗಣತಿ ಕಾರ್ಯಕ್ರಮಕ್ಕೆ ಶಾಸಕ ಜೆ.ಡಿ.ನಾಯ್ಕ, ಹಿಂದೂ ಕಾಲೋನಿಯಲ್ಲಿ ಮನೆ ಗಣತಿ ಮಾಡುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಸಮನ್ವಯ ಸಮಿತಿಯ ಅಧ್ಯಕ್ಷ ಹಾಗೂ ತಹಸೀಲ್ದಾರ ಎಸ್.ಎಮ್.ನಾಯ್ಕ, ಉಪಾಧ್ಯಕ್ಷ ಹಾಗೂ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಉದಯ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಬಿಆರ್ಪಿಗಳಾದ ಎಮ್.ಎನ್.ನಾಯ್ಕ, ಸಿಆರ್ಪಿ ಹೆಚ್.ವಿ.ನಾಯ್ಕ, ಗೋಪಾಲ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಸ್ಥಳೀಯ ಜನವಸತಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಟಿ.ಗೊಂಡ ಹಾಜರಿದ್ದರು.
ವರದಿ: ವಸಂತ ದೇವಾಡಿಗ, ಭಟ್ಕಳ