ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ಅಡುಗೆ ಅನಿಲ ಅಕ್ರಮ ಬಳಕೆ: ಪ್ರಕರಣ ದಾಖಲು

ಭಟ್ಕಳ:ಅಡುಗೆ ಅನಿಲ ಅಕ್ರಮ ಬಳಕೆ: ಪ್ರಕರಣ ದಾಖಲು

Sun, 15 Nov 2009 02:00:00  Office Staff   S.O. News Service
ಭಟ್ಕಳ, ನವೆಂಬರ್ 15: ಕಾನೂನು ಬಾಹೀರವಾಗಿ ಅಡಿಗೆ ಅನಿಲ ತುಂಬಿದ ಸಿಲೆಂಡರನ್ನು ರಿಕ್ಷಾ ಚಾಲನೆಗೆ(ಕೆ‌ಎ೪೭ ೧೩೮೮) ಬಳಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೋರ್ವನ ವಿರುದ್ಧ ಆಹಾರ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.
 
ಆರೋಪಿಯನ್ನಾಗಿ ಯಲ್ವಡಿಕವೂರು ಪಂಚಾಯತ ವ್ಯಾಪ್ತಿಯ ಸರ್ಪನಕಟ್ಟೆ ಹಕ್ಕಲಮನೆ ನಿವಾಸಿ ಮಂಜುನಾಥ ದುರ್ಗಪ್ಪ ನಾಯ್ಕ ಎಂದು ಗುರುತಿಸಲಾಗಿದೆ. ಭಟ್ಕಳ ಶಹರ ಠಾಣೆಯ ಎಸೈ ಮಂಜುನಾಥ ಗೌಡ ಸಿಲೆಂಡರ್ ಸಮೇತ ವಾಹನವನ್ನು ವಶಪಡಿಸಿಕೊಂಡು ಆಹಾರ ನಿರೀಕ್ಷಕ ಶಂಕರಪ್ಪನವರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆ ಮುಂದುವರೆದಿದೆ.

Share: