ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಣ್ಕುಳಿಯಲ್ಲಿ ಬೈಕ್ ಸವಾರನ ಮೇಲೆ ಹರಿದ ಲಾರಿ ಬೈಕ್ ಸವಾರ ಸಾವು

ಮಣ್ಕುಳಿಯಲ್ಲಿ ಬೈಕ್ ಸವಾರನ ಮೇಲೆ ಹರಿದ ಲಾರಿ ಬೈಕ್ ಸವಾರ ಸಾವು

Thu, 22 Sep 2022 06:15:23  Office Staff   so news

ಭಟ್ಕಳ ತಾಲೂಕಿನ ಮಣ್ಣುಳಿಯಲ್ಲಿ ಬೈಕ್ ಸವಾರನ ಮೇಲೆ ಲಾರಿ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾನೆ.ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

ಭಟ್ಕಳ ತಾಲೂಕಿನ ಮಣ್ಣುಳಿಯ ಪುಷ್ಪಾಂಜಲಿ ಕ್ರಾಸ್ ಸಮೀಪ ರಸ್ತೆ ಕ್ರಾಸ್ ಮಾಡಲು ನಿಂತಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದು ಹೋಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.ಸದ್ಯ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೃತ ವ್ಯಕ್ತಿಯು ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮರಂಬಳ್ಳಿ ನಿವಾಸಿ ಮಂಜುನಾಥ ಗೊಂಡ ಎಂದು ತಿಳಿದುಬಂದಿದೆ.

ಈತ ಕೆಲಸಕ್ಕೆ ಹೋಗಲೆಂದು ಮುಳಿಯ ಪುಷ್ಪಾಂಜಲಿ ಕ್ರಾಸ್ ಸಮೀಪ ರಸ್ತೆ ಕ್ರಾಸ್ ಮಾಡಲು ನಿಂತಿದ್ದ ವೇಳೆ ಲಾರಿ ಯೊಂದು ಮುಂಭಾಗದಲ್ಲಿ ಬರುತ್ತಿದ್ದ ಕಾರನ್ನು ಗುದ್ದಿ ರಸ್ತೆ ಕ್ರಾಸ್ ಮಾಡಲು ನಿಂತಿದ್ದ ಬೈಕ್ ಸವಾರನ ಮೇಲೆ ಹರಿದು ಹೋಗಿದೆ.ಅಪಘಾತದ ರಭಸಕ್ಕೆ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ತಕ್ಷಣ ಮಣ್ಣುಳಿಯ ಸ್ಥಳೀಯರು ಆತನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾನೆ.ಸದ್ಯ ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


Share: