ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಮಣಿಪುರ ಘಟನೆಗೆ ಖಂಡನೆ. ಕಾರವಾರದಲ್ಲಿ ಕ್ರಿಶ್ಚಿಯನ್ ನಾಗರಿಕರ ಮೌನ ಪ್ರತಿಭಟನೆ.

ಮಣಿಪುರ ಘಟನೆಗೆ ಖಂಡನೆ. ಕಾರವಾರದಲ್ಲಿ ಕ್ರಿಶ್ಚಿಯನ್ ನಾಗರಿಕರ ಮೌನ ಪ್ರತಿಭಟನೆ.

Tue, 01 Aug 2023 03:02:55  Office Staff   S O News

ಕಾರವಾರ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಸೋಮವಾರ ಕಾರವಾರದಲ್ಲಿ ಕ್ರಿಶ್ಚಿಯನ್ ಸಮುದಾಯದ ನಾಗರಿಕರು ಮೌನ ಪ್ರತಿಭಟನೆ ನಡೆಸಿದ್ದಾರೆ.

ನಗರದ ಮಿತ್ರ ಸಮಾಜ ಮೈದಾನದಲ್ಲಿ ಸೇರಿದ ಕ್ರಿಶ್ಚಿಯನ್ ಧರ್ಮಪ್ರಾಂತ್ಯದ ಮುಖ್ಯಸ್ಥರಾದ ಫಾ ಡೇರಿಕ್ ಫರ್ನಾಂಡೀಸ್ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು. ನಗರದ ಬೀದಿಬಿದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡರು.

ಮೆರವಣಿಗೆಯಲ್ಲಿ ನಾಗರಿಕರು ಫಲಕ ಪ್ರದರ್ಶಿಸಿದರು. ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಮತ್ತು ಪ್ರಾರ್ಥನಾ ಮಂದಿರಗಳನ್ನ ದ್ವಂಸ ಮಾಡಿದ್ದಕ್ಕೆ ಪ್ರತಿಭಟನಾಕಾರರು ಅಸಮಧಾನ ವ್ಯಕ್ತಪಡಿಸಿದ್ರು. ನಮ್ಮ ನಡೆ ಶಾಂತಿಯ ಕಡೆ,ಹಿಂಸೆ ಬೇಡ ಶಾಂತಿ ಬೇಕು,ಮಣಿಪುರದ ನಾಗರಿಕರಿಗೆ ರಕ್ಷಣೆ ನೀಡಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಿದರು.

ಮಣಿಪುರ ಮೂಲದ ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಪಾಲ್ಗೊಂಡು,ತಮ್ಮ ಪಾಲಕರ ಸುರಕ್ಷತೆಯ ಬಗ್ಗೆ ಅತಂಕ ವ್ಯಕ್ತಪಡಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಕ್ರಿಶ್ಚಿಯನ್ ನಾಗರಿಕರು ಭಾಗವಹಿಸಿದ್ದರು.


Share: