ಉಡುಪಿ, ಡಿ.೯: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಹಾಗೂ ಅದರ ವಿದ್ಯಾ ಸಮುಚ್ಛಯವಾಗಿರುವ ಮೂಳೂರಿನ ಮರ್ಕಝ್ ತಅಲೀಮಿಲ್ ಇಹ್ಸಾನ್ನ ದಶಮಾನೋತ್ಸವ ಮಹಾ ಸಮ್ಮೇಳನವನ್ನು ಡಿ.೧೨ ಹಾಗೂ ೧೩ರಂದು ಮೂಳೂರಿನ ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ನ ಅಧ್ಯಕ್ಷ ಅಸ್ಸಯ್ಯಿದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಲ್ ಬುಧವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಈ ಸಂಸ್ಥೆಯಲ್ಲಿ ಅನಾಥಾಲಯ, ಶರೀಅತ್ ಕಾಲೇಜು, ರೆಸಿಡೆನ್ಸಿಯಲ್ ಸ್ಕೂಲ್, ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಹಿಫ್ಲುಲ್ ಕುರಾನ್ ಕಾಲೇಜ್, ಕಂಪ್ಯೂಟರ್ ಸೆಂಟರ್, ಅರೆಬಿಕ್ ಮತ್ತು ಉರ್ದು ಮದರಸ ಮೊದಲಾದ ವಿಭಾಗಗಳಿದ್ದು, ವಿವಿಧ ಜಿಲ್ಲೆಗಳ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ ಎಂದರು.
೧೨ರಂದು ಸಂಜೆ ೪:೩೦ಕ್ಕೆ ಸಮ್ಮೇಳನದ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಅಲ್ಹಾಜ್ ಮುಹಮ್ಮದ್ ಮುಸ್ಲಿಯಾರ್ ಕಾಳಂಬಾಡಿ ನೆರವೇರಿಸಲಿರುವರು. ಮಂಗಳೂರು ಖಾಝಿ ಅಲ್ಹಾಜ್ ಸಿ.ಎಂ.ಅಬ್ದುಲ್ಲ ಮುಸ್ಲಿಯಾರ್ ಚೆಂಬರಿಕ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಎಂ.ಎ.ಖಾಸಿಂ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಲಿದ್ದಾರೆ. ಅಬ್ದುಲ್ ಜಬ್ಬಾರ್ ಹಾಜಿ ಮಿತ್ತಬೈಲ್, ಹಾಜಿ ಮುಹಮ್ಮದ್ ಕುಂಞಿ ಯೆನಪೋಯ, ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಬಳಿಕ ನಡೆಯುವ ಆಧ್ಯಾತ್ಮಿಕ ಸಂಗಮ ‘ಜಲಾಲಿಯ್ಯ ಮಜ್ಲೀಸ್’ ಕಾರ್ಯಕ್ರಮದಲ್ಲಿ ಅಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ದುವಾ ಆಶೀರ್ವಚನ ನೀಡಲಿರುವರು. ಜಲಾಲಿಯ್ಯಾ ಮಜ್ಲೀಸ್ನ ಅಖಿಲ ಭಾರತ ಖಲೀಫ ಡಾ.ಅಸ್ಸೆಯ್ಯಿದ್ ಶುಹೈಬ್ ಆಲಂ ಚೆನ್ನೆ ಆಗಮಿಸಲಿರುವರು. ಅಸೆಯ್ಯಿದ್ ಕೆ.ಎಸ್.ಜಾಫರ್ ಸಾದಿಕ್ ತಂಙಳ್ ಕುಂಬೋಳ್ ನೇತೃತ್ವ ನೀಡಲಿದ್ದು, ಅಬ್ದುಲ್ ಜಬ್ಬಾರ್ ಮಸ್ತಾನ್ ಉಪ್ಪಾಪ, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಮೊದಲಾದವರು ಭಾಗವಹಿಸಲಿದ್ದಾರೆ.
ಡಿ.೧೩ರಂದು ಮಧ್ಯಾಹ್ನ ೨ಗಂಟೆಗೆ ಮಹಿಳಾ ಕಾಲೇಜು ಕಟ್ಟಡಕ್ಕೆ ಅಸೆಯ್ಯಿದ್ ಕುಂಞಿಕೋಯ ತಂಙಳ್ ಕುಂಬೋಳ್ ಶಿಲಾನ್ಯಾಸ ನೆರವೇರಿಸಲಿರುವರು. ಹಾಸ್ಟೆಲ್ ಕಟ್ಟಡಕ್ಕೆ ರಾಜ್ಯಸಭಾ ಉಪಸಭಾಪತಿ ರಹ್ಮಾನ್ ಖಾನ್ ಶಿಲಾನ್ಯಾಸಗೈಯ್ಯಲಿದ್ದಾರೆ. ರಾಜ್ಯ ಗೃಹ ಸಚಿವ ಡಾ.ವಿ.ಎಸ್. ಆಚಾರ್ಯ ನೂತನ ಶಾಲಾ ಕಟ್ಟಡವನ್ನು ಉದ್ಘಾಟಿಸಲಿರುವರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರು ನೂತನ ಕಂಪ್ಯೂಟರ್ ಲ್ಯಾಬ್ ಹಾಗೂ ಉಡುಪಿ ಸಂಸದ ಸದಾನಂದ ಗೌಡ ಶಾಲಾ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
ಬಳಿಕ ನಡೆಯುವ ಭಾವೈಕ್ಯತಾ ಸಮಾವೇಶವನ್ನು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಅಸೆಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಲ್ ವಹಿಸಲಿದ್ದಾರೆ. ಶ್ರೀಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅರಸೀಕೆರೆ, ಎಂ.ಎಸ್.ಎಂ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಪಿ, ರೆ.ಫಾ.ರಿಚರ್ಡ್ ಕುವೆಲ್ಲೊ ಶಿರ್ವ ಅವರು ಸಂದೇಶ ಭಾಷಣ ಮಾಡಲಿರುವರು.
ರಾಜ್ಯ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ, ಶಾಸಕರಾದ ಅಭಯಚಂದ್ರ ಜೈನ್, ಲಾಲಾಜಿ ಆರ್.ಮೆಂಡನ್, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಮಾಜಿ ಸಚಿವ ವಸಂತ ವಿ.ಸಾಲ್ಯಾನ್, ಬಿ.ಎ.ಮೊದಿನ್, ಝಮೀರ್ ಅಹ್ಮದ್, ಟಿ.ಎಂ.ಶಹೀದ್, ಎಂ.ಎ.ಗಫೂರ್, ದೇವಿಪ್ರಸಾದ್ ಶೆಟ್ಟಿ, ಬಿ.ಎಂ.ಮೊದಿನ್ ಬಾವ ಮುಖ್ಯಅತಿಥಿಗಳಾಗಿರುವರು.
ಸಂಜೆ ೪-೩೦ಕ್ಕೆ ಜರಗುವ ಸಮಾರೋಪ ಮಹಾಸಮ್ಮೇಳನದಲ್ಲಿ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ನಿರ್ದೇಶಕ ಅಸೆಯ್ಯಿದ್ ಕೆ.ಅಬ್ದುಲ್ ರಹ್ಮಾನ್ ಕುಂಞಿಕೋಯ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ. ಸಮ್ಮೇಳನವನ್ನು ಅಖಿಲ ಭಾರತ ಸುನ್ನೀ ಶಿಕ್ಷಣ ಮಂಡಳಿಯ ಅಧ್ಯಕ್ಷ ನೂರುಲ್ ಉಲಮಾ ಎಂ.ಎ.ಅಬ್ದುಲ್ ಖಾದರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಖಾಝಿ ಅಲ್ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ವಹಿಸಲಿದ್ದಾರೆ.
ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣಗೈಯ್ಯಲಿದ್ದಾರೆ. ಸುನ್ನೀ ದುಅವತೇ ಇಸ್ಲಾಮಿಯ ಅಮಿರ್ ಮೌಲಾನ ಹಾಪಿಝ್ ಮುಹಮ್ಮದ್ ಶಾಕಿರ್ ಅಲಿ ನೂರಿ ಮುಂಬೈ, ಅಬ್ದುಲ್ ಲತೀಫ್ ಸಅದಿ ಪಯಸ್ವಿ ಭಾಷಣ ಮಾಡಲಿರುವರು. ಅಲ್ಹಾಜ್ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಅಲ್ಹಾಜ್ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಲ್ಹಾಜ್ ಯೆನಪೋಯ ಅಬ್ದುಲ್ ಕುಂಞಿ, ಹಾಜಿ ಯು.ಕೆ.ಮೋನು ಕಣಚೂರು, ಉಸ್ಮಾನ್ ಹಾಜಿ ಮಿತ್ತೂರು, ಕೆ.ಪಿ.ಅಹ್ಮದ್ ಹಾಜಿ ಪುತ್ತೂರು, ಜಿ.ಎ.ಬಾವ, ನೋಟರಿ ಬಿ.ಮೊದಿನ್ ಮುಂಬೈ, ಟಿ.ಬಿ.ಎ.ರಹ್ಮಾನ್ ಹಾಸನ ಮುಖ್ಯಅತಿಥಿಗಳಾಗಿ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ.ಯ ಸ್ಥಾಪಕಾಧ್ಯಕ್ಷ ಅಲ್ಹಾಜ್ ಎ.ಬಿ.ಹಸನುಲ್ ಫೈಝಿ ಅಜ್ಜಾವರ ಅವರನ್ನು ಸನ್ಮಾನಿಸಲಾಗುವುದು. ಸಮಾರೋಪ ಮಹಾಸಮ್ಮೇಳನದಲ್ಲಿ ೨೫ಸಾವಿರ ಮಂದಿ ಸೇರುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ದಶಮಾನೋತ್ಸವ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಇಬ್ರಾಹಿಂ ಮನ್ಹರ್ ಕಾಪು, ಮೇಲ್ವಿಚಾರಕ ಎಂ.ಎಚ್.ಬಿ. ಮುಹಮ್ಮದ್ ಮೂಳೂರು, ಮರ್ಕಝ್ ತಅಲೀಮಿಲ್ ಇಹ್ಸಾನ್ನ ಮ್ಯಾನೇಜರ್ ಮೌಲಾನ ಯು.ಕೆ.ಮುಸ್ತಫಾ ಸಅದಿ, ಕಾರ್ಯದರ್ಶಿ ಬಶೀರ್ ಅಲಿ ವೈ.ಬಿ.ಸಿ. ಉಪಸ್ಥಿತರಿದ್ದರು