ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭೀಕರ ರಸ್ತೆ ಅಪಘಾತ:ಆಕ್ಟಿವಾ ಸವಾರ ಸ್ಥಳದಲ್ಲೇ ಸಾವು

ಭೀಕರ ರಸ್ತೆ ಅಪಘಾತ:ಆಕ್ಟಿವಾ ಸವಾರ ಸ್ಥಳದಲ್ಲೇ ಸಾವು

Thu, 12 May 2022 06:55:47  Office Staff   SO NEWS

ಭಟ್ಕಳ:ಟ್ಯಾಂಕರ್ ಮತ್ತು ಆಕ್ಟಿವಾ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಕ್ಟಿವಾ ಸವಾರ ಸ್ಥಳದಲ್ಲೇ ಮೃತಪಟ್ಟಿದ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮೂಡಭಟ್ಕಳ ಬೈಪಾಸ್ ಬಳಿ ಬುಧವಾರ ನಡೆದಿದೆ.
ಮೃತಪಟ್ಟ ವ್ಯಕ್ತಿ ಇಕ್ಬಾಲ್ ಮುಲ್ಲಾ ಬೈಂದೂರು ತಾಲ್ಲೂಕಿನ ಶಿರೂರ ಅಡುವಿನ ಕೋಣೆ ನಿವಾಸಿ ಎಂದು ಗುರುತಿಸಲಾಗಿದೆ.
ಶಿರೂರ ದಿಂದ ಭಟ್ಕಳಕ್ಕೆ ತೆರಳುತ್ತಿದ್ದ ಇಕ್ಬಾಲ್ ಭಾರೀ ಮಳೆಗೆ ಯಿಂದಾಗಿ ರಸ್ತೆಯಲ್ಲಿ ಹೊಂಡ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಮಂಗಳೂರು ಕಡೆಯಿಂದ ಬರುತ್ತಿದ್ದ ಟ್ಯಾಂಕರ್ ಡಿಕ್ಕಿ ಹೊಡೆದು  ಕೆಳಗಡೆ ಬಿದ್ದಿದ್ದು ಟ್ಯಾಂಕರ್ ಚಕ್ರ ಮೈಮೇಲೆ ಹರಿದು ಮೃತಪಟ್ಟಿದಾನೆ.
ಅಪಘಾತ ರಭಸಕ್ಕೆ ದೇಹದ ಬಾಗ ಛಿದ್ರ ವಾಗಿದ್ದು ಸ್ಥಳೀಯ ಆಟೋಚಾಲಕರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆ ಸಾಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 


Share: