ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ: ಅಗಲಿದ ಖಮ್ರಿ ಬಾಷಾ ಹಾಗೂ ಮೌಲಾನಾ ಇಕ್ಬಾಲ್ ನದ್ವಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಭಟ್ಕಳ ಮುಸ್ಲಿಂ ಜಮಾತ್ ದುಬೈ

ದುಬೈ: ಅಗಲಿದ ಖಮ್ರಿ ಬಾಷಾ ಹಾಗೂ ಮೌಲಾನಾ ಇಕ್ಬಾಲ್ ನದ್ವಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಭಟ್ಕಳ ಮುಸ್ಲಿಂ ಜಮಾತ್ ದುಬೈ

Mon, 08 Mar 2010 20:04:00  Office Staff   S.O. News Service
ದುಬೈ, ಮಾರ್ಚ್ ೯: ಇತ್ತೀಚೆಗೆ ಭಟ್ಕಳದಲ್ಲಿ ಸ್ವರಸ್ಥರಾದ ಇಬ್ಬರು ಗಣ್ಯರಿಗೆ ಭಟ್ಕಳ ಮುಸ್ಲಿಂ ಜಮಾತ್ ದುಬೈ ಸಂಘಟನೆಯ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮೌಲಾನಾ ಇಕ್ಬಾಲ್ ನದ್ವಿ ಹಾಗೂ ಸಂಘಟನೆಯ ಮಾಜಿ ಖಜಾಂಜಿಯಾಗಿದ್ದ ಖಮ್ರಿ ಬಾಶಾರವರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಹಲವು ಪ್ರಮುಖರು ನೆನೆಸಿಕೊಂಡರು. ಸಭೆಯಲ್ಲಿ ಮಾತನಾಡಿದವರಲ್ಲಿ ಎಸ್.ಎಂ. ಖಲೀಲ್, ಬಾಶಾ ರುಕ್ನುದ್ದೀನ್, ಮೌಲಾನ ತಲ್ಹಾ ನದ್ವಿ, ಮೌಲಾನಾ ಹಾಶಿಮ್ ಫಾರೂಖ್ ನದ್ವಿ, ಅಬುಲ್ ಬಾರಿ ಮೊಹ್ತಿಶಾಮ್, ಮೌಲಾನಾ ಮತೀನ್ ಮುನೀರಿ ಹಾಗೂ ನಿರ್ಗಮಿಸುತ್ತಿರುವ ಅಧ್ಯಕ್ಷರಾದ ಖಲೀಫಾ ಗೌಸ್ ಪ್ರಮುಖರಾಗಿದ್ದರು.

 

 

 

9-dxb2.jpg

9-dxb3.jpg

9-dxb4.jpg 

ಜಮಿಯಾತ್ ಖರೀಯಾ ಎಂಬ ಸಂಘಟನೆಯ ಮೂಲಕ ಜಾತಿಬೇಧವಿಲ್ಲದೇ ನೂರಾರು ಬಡವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲವಾಗಿಸಿದ ಮೌಲಾನಾ ಇಕ್ಬಾಲ್ ನದ್ವಿಯವರ ಸೇವೆ ಸ್ಮರಣಾರ್ಥವಾದುದೂ ಹಾಗೂ ಇತರರಿಗೆ ಒಂದು ಮಾದರಿ ಹಾಗೂ ಜಮಾತೆ ಇಸ್ಲಾಮ್ ಹಿಂದ್ ಹಾಗೂ ಖಲೀಫಾ ಜಮಾತುಲ್ ಮುಸ್ಲಿಮೀನ್ ಸಂಘಟನೆಗಳಿಗೆ ಖಮ್ರಿ ಬಾಷಾರವರು ಸಲ್ಲಿಸಿದ ಸೇವೆ ಅವಿಸ್ಮರಣೀಯ ಎಂಬುವುದು ಹಲವರ ಅಭಿಪ್ರಾಯವಾಗಿತ್ತು. ತಮ್ಮ ಅನುಭವವನ್ನು ಸ್ಮರಿಸಿಕೊಂಡ ಖಲೀಫಾ ಗೌಸ್ ಒಮ್ಮೆ ಶಾರ್ಜಾ ಮಸೀದಿಯಲ್ಲಿ ಇಮ್ಮಾಮತ್ವ ವಹಿಸಿದ್ದ ಮೌಲಾನಾ ಇಕ್ಬಾಲ್ ನದ್ವಿಯವರ ಸ್ವರ ಹಾಗೂ ಕುರಾನ್ ಪಠಣವನ್ನು ಆಲಿಸಿದ ಜನತೆ ಇವರು ಖಂಡಿತಾ ಅರಬ್ ಮೂಲದವರಿರಬೇಕೆಂದು ಅಂದುಕೊಂಡಿದ್ದು ಬಳಿಕ ಇವರೊಬ್ಬ ಭಾರತೀಯರೆಂದು ತಿಳಿದು ಚಕಿತರಾಗಿದ್ದರು ಎಂದು ತಿಳಿಸಿದರು.

 

ಅಗಲಿದ ಗಣ್ಯರ ಮನೆಯವರಿಗೆ ಸಂತಾಪ ಪತ್ರಗಳನ್ನು ಮೌಲಾನಾ ಗೌಸ್ ಹಾಗೂ ನೂತನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ರವರು ನೀಡಿದರು. ಅಲ್ಲದೇ ದುಬೈಯಲ್ಲಿ ಸುಮಾರು ಮೂವತ್ತು ವರ್ಷ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದಷ್ಟೇ ಸ್ವದೇಶಕ್ಕೆ ಮರಳಿದ್ದ ಎಸ್.ಎಂ. ಸೈಯದ್ ಮಸೂದ್ ರವರೂ ನಿನ್ನೆ ಸ್ವರ್ಗಸ್ಥರಾಗಿದ್ದು ಅವರಿಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

ಕಾರ್ಯಕ್ರಮ ಮೌಲಾನಾ ಮುನೀಂ ರವರ ಕುರಾನ್ ಪಠಣದೊಂದಿಗೆ ಪ್ರಾರಂಭವಾಗಿ ಮೌಲಾನಾ ಮೌಲಾ ಕರನಿಯರವ ದುವಾದೊಂದಿಗೆ ಸಮಾಪ್ತಿಗೊಂಡಿತು. ಮೌಲಾನಾ ಮೌಲಾರವರೇ ಕಾರ್ಯಕ್ರಮ ನಿರೂಪಿಸಿದರು.

 


Share: