ಭಟ್ಕಳ : ತಮ್ಮ ಬೇಡಿಕೆ ಈಡೇರಿಸುವಂತೆ ಮೊಗೇರ ನಾಗರಿಕರು ವಿನೂತನ ಪ್ರತಿಭಟನೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಹಿಂದೆ ನೀಡುತ್ತಿರುವ ಎಸ್ಸಿ ಪ್ರಮಾಣಪತ್ರವನ್ನ ಸರ್ಕಾರ ನಿಲ್ಲಿಸಿರೋದನ್ನ ಖಂಡಿಸಿ ಜಾಗಂಟೆ, ಶಂಖನಾದದ ಮೂಲಕ ಸರ್ಕಾರಕ್ಕೆ ಮತ್ತೆ ಎಚ್ಚರಿಕೆಯನ್ನ ನೀಡಿದ್ದಾರೆ.
ಮಂಗಳವಾರ ಬಂದರ್ ರಸ್ತೆ ಮಾರ್ಗವಾಗಿ ಮೆರವಣೆಗೆ ನಡೆಸಿದರು. ಮೆರವಣಿಗೆ ಸಂಶುದ್ಧಿನ್ ವೃತ್ತದ ಸಮೀಪ ಬರುತ್ತಿದ್ದಂತೆ ಮಂಜಯ್ಯ ಎಂಬಾತ ನ್ಯಾಯ ಬೇಕೆಂದು ಪೆಟ್ರೊಲ್ ಸುರಿದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆಯಿತು. ಈ ವೇಳೆ ಅಲ್ಲಿಯೇ ಇರುವ ನಾಗರಿಕರು ಮತ್ತು ಪೊಲೀಸರು ಮುಂದಾಗಬಹುದಾದ ಅಪಾಯವನ್ನ ತಪ್ಪಿಸಿದ್ದಾರೆ.
ಕಳೆದು ಮೂರು ವಾರಗಳಿಂದ ಮೊಗೇರ ಜನಾಂಗದ ನಾಗರಿಕರು ಭಟ್ಕಳದ ಮಿನಿವಿಧಾನಸೌಧದ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹಲವು ಬಾರೀ ಆತ್ಮಹತ್ಯೆಯ ಎಚ್ಚರಿಕೆಯನ್ನ ಸರ್ಕಾರಕ್ಕೆ ನೀಡಿದ್ದಾರೆ. ಆದ್ರೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆತಿಲ್ಲ. ತಮಗೆ ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸಲು ಮೊಗೇರ ಜನಾಂಗದ ನಾಗರಿಕರು ಮುಂದಾಗಿದ್ದಾರೆ.