ಭಟ್ಕಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕಾ ಬಾಲಭವನ ಸೊಸೈಟಿ ಶಿಶು ಅಭಿವೃದ್ದಿ ಯೋಜನೆ ಭಟ್ಕಳ ಇವರುಗಳ ಆಶ್ರಯದಲ್ಲಿ ಮೇ 5 ರಿಂದ 8 ದಿನಗಳ ಕಾಲ ಮಕ್ಕಳಿಗಾಗಿ ಉಚಿತ ಬೇಸಿಗೆ ಶಿಬಿರವನ್ನು ಇಲ್ಲಿನ ಹುರುಳಿಸಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಭಟ್ಕಳ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ದಿನಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ಉಚಿತ ಬೇಸಿಗೆ ಶಿಬಿರವೂ ನಡೆಯಲಿದ್ದು, ಶಿಬಿರಕ್ಕೆ 5 ವರ್ಷದಿಂದ 16 ವರ್ಷ ವಯೋಮಾನದ ಮಕ್ಕಳಿಗೆ ಭಾಗವಹಿಸಲು ಅವಕಾಶವಿದೆ. 50 ಮಕ್ಕಳಿಗೆ ಮಾತ್ರ ಅವಕಾಶ ಇದ್ದು, ಮೊದಲು ಹೆಸರು ನೋಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಶಿಬಿರದಲ್ಲಿ ಸಮೂಹ ನೃತ್ಯ, ಸಮೂಹ ಗೀತೆ, ಕಸದಿಂದ ರಸ, ಜೇಡಿಮಣ್ಣಿನ ಕಲೆ, ಯಕ್ಷಗಾನ, ಚಿತ್ರಕಲೆ ಸೇರಿದಂತೆ ಮುಂತಾದ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಆಸಕ್ತ ಅರ್ಹ ವಿದ್ಯಾರ್ಥಿಗಳು ಮೇ 2 ರ ಒಳಗಾಗಿ ಮಕ್ಕಳ ಬಯೋಡೆಟಾ ದೊಂದಿಗೆ ಶಿಶು ಅಭಿವೃದ್ಧಿ ಯೋಜನೆ ಭಟ್ಕಳ, ಹಳೆ ತಹಸೀಲ್ದಾರ್ ಕಛೇರಿ, ಬಝಾರ ರೋಡ್ ಭಟ್ಕಳ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಲು ಶಿಶು ಅಭಿವೃದ್ದಿ ಯೋಜನೆ ಭಟ್ಕಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ನಂ: 9880196465 ಇವರನ್ನು ಸಂಪರ್ಕಿಸಲು ತಿಳಿಸಿಲಾಗಿದೆ