ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ಜನಮನ ಸೆಳೆಯುತ್ತಿರುವ ನವಾಯತ್ ಮೇಳ

ಭಟ್ಕಳದಲ್ಲಿ ಜನಮನ ಸೆಳೆಯುತ್ತಿರುವ ನವಾಯತ್ ಮೇಳ

Sun, 01 Jan 2023 19:33:18  Office Staff   SO News

ಭಟ್ಕಳ: ಇಲ್ಲಿನ ನವಾಯತ್ ಕಾಲೋನಿ ತಾಲೂಕು ಕ್ರೀಡಾಂಗಣ ದಲ್ಲಿ ಆಯೋಜಿಸಲಾಗಿರುವ ಜಗತ್ತಿನಲ್ಲಿಯೇ ವಿಶಿಷ್ಟ ಸಮುದಾಯವಾದ ನವಾಯತ ಸಮುದಾಯದವರಿಗೆ ಸೇರಿದ ವಿವಿಧ ವಾಣಿಜ್ಯ ಮಳಿಗೆಗಳ ನವಾಯತ್ ವಾಣಿಜ್ಯ ಮೇಳವು ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

180ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ನವಾಯತ್ ಮೇಳದ ಜನಾಕರ್ಷಣೆಯ ಕೇಂದ್ರವಾಗಿದೆ. ಬಟ್ಟೆಬರೆ, ಬ್ಯಾಗ್, ಎಲೆಕ್ಟ್ರಿಕ್ ಉಪಕರಣಗಳಿಂದ ಹಿಡಿದು ಆಸ್ಪತ್ರೆ, ಇಸ್ಲಾಮಿಕ್ ಬ್ಯಾಂಕ್‌ ವರೆಗೆ ಭಟ್ಕಳದ ವಾಣಿಜ್ಯ ಕ್ಷೇತ್ರದ ವಿವಿಧ ಮಗ್ಗುಲನ್ನು ಈ ಮೇಳ ಪರಿಚಯಿಸುತ್ತದೆ. ಕೆಲವು ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಖರೀದಿಸಲು ಅವಕಾಶ ನೀಡಲಾಗಿದೆ. ಸಹಸ್ರಾರು ಸಂಖ್ಯೆಯಲ್ಲಿ ಜನರು ಈ ಮೇಳಕ್ಕೆ ಆಗಮಿಸುತ್ತಿದ್ದು, ಜನ ಪ್ರವಾಹವನ್ನು ತಡೆಯಲು ಸ೦ಘಟಕರು ಹರ ಸಾಹಸ ಪಡುತ್ತಿದ್ದಾರೆ. 

ಶುಕ್ರವಾರ ಸಂಜೆಯಿಂದ ಆರಂಭವಾಗಿರುವ ಈ ವ್ಯಾಪಾರ ಮೇಳವು ಸೋಮವಾರ ಕೊನೆಗೊಳ್ಳಲಿದೆ.


Share: