ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ಗಣಪತಿ ವೈಭವ: ಭಕ್ತರನ್ನು ಆಕರ್ಷಿಸುತ್ತಿರುವ ಗಣೇಶನ ವಿಗ್ರಹಗಳು

ಭಟ್ಕಳದಲ್ಲಿ ಗಣಪತಿ ವೈಭವ: ಭಕ್ತರನ್ನು ಆಕರ್ಷಿಸುತ್ತಿರುವ ಗಣೇಶನ ವಿಗ್ರಹಗಳು

Fri, 02 Sep 2022 05:44:16  Office Staff   SO NEWS

ಭಟ್ಕಳ:ವರ್ಷಂಪ್ರತಿ ಆಚರಿಸುವಂತ ಗಣೇಶೋತ್ಸವ
ಈ ವರ್ಷವು ಸಹ ತಾಲೂಕಿನಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮದಿಂದ ಸಾಂಪ್ರದಾಯಿಕವಾಗಿ ಆಚರಿಸಿದರು 

ಕಳೆದೆ ಇರಡು ಮೂರು ವರ್ಷಗಳಿಂದ ತೀವ್ರ ಆತಂಕ ಸೃಷ್ಟಿಸಿ ಎಲ್ಲೆಡೆ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ,ಸಾಂಸ್ಕೃತಿಕ ಸ್ವಾತಂತ್ರ್ಯವನ್ನೇ ಕಸಿದುಕೊಂಡ ಕೋವಿಡ್.  ಈ ಬಾರಿ ಸಂಪೂರ್ಣ ಕಡಿಮೆ ಆಗಿರುವ ಹಿನ್ನೆಲೆ  ಭಟ್ಕಳ ತಾಲ್ಲೂಕಿನ ಈ ಬಾರಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. 
ಸಂಕಷ್ಟ ಹರಣ ವಿಘ್ನ ನಿವಾರಕ ಎಂದೆ ಖ್ಯಾತಿ ಪಡೆದಿರುವ ವಿಘ್ನ ನಿವಾರಕ ಗಣೇಶ ಚತುರ್ಥೀಯನ್ನು ಸಮಸ್ಥ ಭಕ್ತವೃಂದವು ತಾಲೂಕಿನಾದ್ಯಂತ ಸರಳವಾಗಿ ಆಚರಿಸುದರ ಮೂಲಕ ದೈವ ಕೃಪೇಗೆ ಪಾತ್ರರಾದರು. ಭಟ್ಕಳ ತಾಲೂಕಿನಾದ್ಯಂತ ವಿವಿದೆಡೆ ಸ್ಥಾಪಿಸಲ್ಪಟ್ಟ  ತಾಲೂಕಿನಾದ್ಯಂತ ಗಣಪತಿ ವಿಗ್ರಹವನ್ನು ಮೇರವಣಿಗೆಯ ಮೂಖಾಂತರ ತಂದು ಗಣೇಶನ ವಿಗ್ರಹಗಳನ್ನು ಭಕ್ತರು ಭಕ್ತಿಪರವಶರಾಗಿ ಪೂಜಿಸುವುದರ ಮೂಲಕ  ತಾಲೂಕಿನಾದ್ಯಂತ ಹಬ್ಬವನ್ನು ಆಚರಿಸಿದರು. 

ಮುಟ್ಟಳಿ ಮೂಡು ಭಟ್ಕಳದ  ಗಣಪ ಕೆ.ಎಸ್ ಆರ್ ಟಿ ಸಿ  ನೌಕರರ ಸಂಘದ ವತಿಯಿಂದ ಪೂಜಿತ ಗಣಪ,  ಭಟ್ಕಳ ನ್ಯೂ ಇಂಗ್ಲೀಷ ಸ್ಕೂಲ್ ಗಣಪ. ತಲಗೋಡು ಕೋಟಿ ಮನೆ ಗಣಪ, ತಲಾಂದ ಸಾರ್ವಜನಿಕರ ಗಣಪತಿ, ಹೆಬ್ಬಳೆ ಗಾಂದಿನಗರದ ಸಾರ್ವಜನೀಕ ಗಣಪ, ಕೌವುರ್ ಸಾರ್ವಜನಿಕ ಗಣಪತಿ, ಸಬ್ಬತ್ತಿ ಜ್ವಾಳದ ಮುಲ್ಲಿ ಗಣಪ, ಮಣ್ಕುಳಿ ಸಾರ್ವಜನಿಕ ಗಣಪ.ಅಲ್ಲದೆ ಭಟ್ಕಳದ ಆಟೋಚಾಲಕ ಮಾಲಕರ ಗಣಪ, ನಿಚ್ಚಲಮಕ್ಕಿ ವೇಂಕಟರಮಣ ಗಣಪ, ಹನುಮಾನ್ ದೇವಸ್ಥಾನದ ಗಣಪ, ಪೋಲಿಸ್ ಠಾಣೇಯ ಗಣಪ,  ಮುರ್ಡೆಶ್ವರ ಸಾರ್ವಜನಿಕ ಶ್ರೀ ಸಿದ್ದೀವಿನಾಯಕ ಸೇವಾ ಸಮೀತಿಯ ಗಣೇಶ, ಹೀಗೆ ತಾಲೂಕಿನಾದ್ಯಂತ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು


Share: