ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದ ದಾವತ್ ಸೆಂಟರ್ ನಲ್ಲಿ ಇಫ್ತಾರ್ ಸೌಹಾರ್ದಸಂಗಮ ಕಾರ್ಯಕ್ರಮ

ಭಟ್ಕಳದ ದಾವತ್ ಸೆಂಟರ್ ನಲ್ಲಿ ಇಫ್ತಾರ್ ಸೌಹಾರ್ದಸಂಗಮ ಕಾರ್ಯಕ್ರಮ

Mon, 10 Apr 2023 23:17:56  Office Staff   SOnews


ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆ ಹಾಗೂ ಸದ್ಭಾವನ ಮಂಚ್ ವತಿಯಿಂದ ನಗರದ ಸುಲ್ತಾನ್ ಸ್ಟಿçÃಟ್ ನಲ್ಲಿರುವ ‘ದಾವತ್ ಸೆಂಟರ್’ ನಲ್ಲಿ ರವಿವಾರ ಸಂಜೆ ‘ಇಫ್ತಾರ್ ಸೌಹಾರ್ದಸಂಗಮ’ ಕಾರ್ಯಕ್ರಮ ಜರಗಿತು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ರಾಜ್ಯ ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ, ಶೋಷಿತ, ಮರ್ದಿತರ ಕೈ ಹಿಡಿದು ಇತರರಿಗೆ ಯಾವುದೇ ತೊಂದರೆ ನೀಡದೆ ಬದುಕುವುದೇ ಧರ್ಮ ಎಂದ ಹೇಳಿದರು. 

ಅಂಜುಮನ್ ಪದವಿ ಮಹಾವಿದ್ಯಾಲಯದ ಫ್ರೋ. ಆರ್.ಎಸ್ ನಾಯಕ ಮಾತನಾಡಿ, ಉಪವಾಸ ಎಂದರೆ  ದೇವರ ಹತ್ತಿರ ಇರುವುದು ಭಗವಂತನ ಸನ್ನಿಧಿಯಲ್ಲಿ ಇರುವುದು ಎಂದಾಗಿದೆ. ಇಂದ್ರಿಯಗಳ ಮೇಲೆ ನಿಗ್ರವಿಲ್ಲದೆ, ದೇಹವನ್ನು ದಂಡಿಸದೇ ಉಂಡುAಡು ಮಲಗಿಕೊಂಡರೆ ನಮಗೆ ಸ್ವರ್ಗ ಸಿಗುವುದಿಲ್ಲ ಎಂದು ಹೇಳಿದರು. 

ನೂರ್ ಜಾಮಿಯ ಮಸೀದಿ ಖತೀಪ್ ಮತ್ತು ಇಮಾಮ್ ಮೌಲಾನ ಮುಹಮ್ಮದ್ ಅಮೀನ್ ರುಕ್ನುದ್ದೀನ್ ನದ್ವಿ ಮಾತನಾಡಿ, ಉಪವಾಸವು ಮನುಷ್ಯರ ಬಗ್ಗೆ ಅನುಕಂಪ, ಕನಿಕರವನ್ನು ಜಾಗೃತಗೊಳಿಸುತ್ತದೆ. ತಾನು ಹಸಿದಿದ್ದು ಇತರರ ಹಸಿವು ಏನು ಎಂಬುದರ ಕುರಿತು ಪ್ರಾಕ್ಟಿಕಲ್ ಅನುಭವ ಹೊಂದುತ್ತಾನೆ ಎಂದ ಅವರು, ನಿಮ್ಮ ಪ್ರತಿಭೆ, ನಿಮ್ಮ ಹಣ, ನಿಮ್ಮ ಸಮಯ ಎಲ್ಲವೂ ಜನರ ಒಳಿತಿಗಾಗಿ ವಿನಿಯೋಗವಾಗಬೇಕು ಜನರ ಸಂಕಷ್ಟಗಳನ್ನು ಅರಿತು ಬದುಕುವಲ್ಲಿ ಉಪವಾಸಚಾರಣೆಯೂ ಪ್ರೇರಣೆ ನೀಡುತ್ತದೆ ಎಂದರು. 

ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸದ್ಭಾವನ ಮಂಚ್‌ನ ಅಧ್ಯಕ್ಷ ಸತೀಶ್ ಕುಮಾರ್ ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ನಾಮಧಾರಿ ಸಮಾಜದ ಮುಖಂಡ ಎಂ.ಆರ್.ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ್ ನಾಯ್ಕ ಈ ಸಂದರ್ಭದಲ್ಲಿ ಮಾತನಾಡಿದರು. 

ಸದ್ಭಾವನ ಮಂಚ್ ಕಾರ್ಯದರ್ಶಿ ಎಂ.ಆರ್.ಮಾನ್ವಿ ಪ್ರಸ್ತಾವಿಕ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. 


 


Share: