ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಸಹಾಯಕ ಆಯುಕ್ತರಾಗಿ ಡಾ.ನಯನಾ ಎನ್. ಅಧಿಕಾರ ಸ್ವೀಕಾರ

ಭಟ್ಕಳ ಸಹಾಯಕ ಆಯುಕ್ತರಾಗಿ ಡಾ.ನಯನಾ ಎನ್. ಅಧಿಕಾರ ಸ್ವೀಕಾರ

Thu, 06 Jul 2023 06:05:06  Office Staff   SO News

ಭಟ್ಕಳ: ಭಟ್ಕಳ-ಹೊನ್ನಾವರ ಉಪ ವಿಭಾಗದ ನೂತನ ಉಪ ವಿಭಾಗಾಧಿಕಾರಿಯಾಗಿ ಡಾ. ನಯನಾ ಎನ್. ಅಧಿಕಾರ ವಹಿಸಿಕೊಂಡಿದ್ದಾರೆ. ಉಪ ವಿಭಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಮತಾದೇವಿ ಜಿ.ಎಸ್‌. ಅವರು ಪದೋನ್ನತಿ ಹೊಂದಿ ಕರ್ನಾಟಕ ಆಡಳಿತ ಸೇವೆಯ ಹಿರಿಯ ಶ್ರೇಣಿ ಅಧಿಕಾರಿಯಾಗಿ ವರ್ಗಾವಣೆಗೊಂಡಿದ್ದರಿಂದ ತೆರವಾದ ಸ್ಥಾನಕ್ಕೆ ನಯನಾ ಎನ್. ನೇಮಕವಾಗಿದ್ದಾರೆ.

ಡಾ.ನಯನಾ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಕೆಎಎಸ್ (2021) ಕಿರಿಯ ಶ್ರೇಣಿಯ ಅಧಿಕಾರಿಯಾಗಿರುವ ಡಾ.ನಯನ ಅವರು ಎಮ್‌ಬಿಬಿಎಸ್ ಪದವೀಧರೆಯಾಗಿದ್ದು, ಕೆಎಎಸ್‌ ಕಿರಿಯ ಶ್ರೇಣಿಯ ಅಧಿಕಾರಿ ನಯನಾ ಅವರು ಬಳ್ಳಾರಿ ವಿಜಯನಗರದ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮುಖ್ಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದರು


Share: