ಗದಗ (ಕರ್ನಾಟಕ ವಾರ್ತೆ) ಮಾರ್ಚ ೫ : ಮಲಪ್ರಭಾ ಮತ್ತು ಘಟಪ್ರಭಾ ಕಾಡಾ ಪ್ರಾಧಿಕಾರದವತಿಯಿಂದ ಕೈಕೊಂಡಿರುವ ಪ್ರಸಕ್ತ ಸಾಲಿನಲಿಯ್ಲ ಎಲ್ಲ ಕಾಮಗಾರಿಗಳನ್ನು ಮಾರ್ಚ ಅಂತ್ಯದೊಳಗೆ ಪೂರ್ತಿಗೊಳಸಬೇಕು ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ಮತ್ತು ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಡಾ ಆಡಳಿತಾಧಿಕಾರಿ ಡಾ|| ಎ.ಜಿ ಧುಮಾಳೆ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಗದಗ ಜಿಲ್ಲೆಯ ನರಗುಂದ ತಾಲೂಕಿನ ಸುರಕೋಡ ಬ್ಲಾಕ್-೧ರಲ್ಲಿ ಪ್ರಸಕ್ತ ಸಾಲಿನಲ್ಲಿ ಮುಕ್ತಾಯಗೊಂಡ ಹೊಲಬಸಿಗಾಲುವೆ ಕೆಲಸದ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.
೧,೫೬೭೪೬.೦೦ ರೂ.ಗಳ ವೆಚ್ಚದಲ್ಲಿ ಕೈಕೊಳ್ಳಲಾದ ಸದರಿ ಹೊಲಬಸಿಗಾಲುವೆ ಕಾಮಗಾರಿಯಿಂದ ೪೨ ಜನ ರೈತರಿಗೆ ಪ್ರಯೋಜನವಾಗಲಿದ್ದು, ೭೧.೪೬ ಹೇಕ್ಟರ್ ಜಮೀನು ಸುಧಾರಣೆಯಾಗಲಿದೆ ಎಂದು ಅವರು ತಿಳಿಸಿದರು. ಸದರಿ ಕಾಮಗಾರಿಯ ಗುಣಮಟ್ಟ ಕುರಿತಂತೆ ರೈತರು ಸಮಾಧಾನ ವ್ಯಕ್ತಪಡಿಸಿದರು. ನಂತರ ಗದಗ ಜಿಲ್ಲೆಯ ನರಗುಂದ ತಾಲೂಕಿನ ನರಗುಂದ ಅರ್ಬನ್ ಬ್ಲಾಕ್-೧ರಲ್ಲಿ ಪ್ರಾರಂಭವಾದ ಹೊಲ ಬಸಿಗಾಲುವೆ ಕೆಲಸದ ಕಾಮಗಾರಿಯನ್ನು ಸಹ ಪರಿಶೀಲಿಸಿದ ಅವರು ೧೫೬೧೩೪ ರೂ.ಗಳ ವೆಚ್ಚದಲ್ಲಿ ಕೈಕೊಳ್ಳಲಾದ ಸದರಿ ಹೊಲಬಸಿಗಾಲುವೆ ಕಾಮಗಾರಿಯಿಂದ ೨೩ ಜನ ರೈತರಿಗೆ ಪ್ರಯೋಜನವಾಗಲಿದೆ. ೪೯.೨೯ ಹೇಕ್ಟರ್ ಜಮೀನು ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು.
ಬಾಕಿ ಉಳಿದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದ ಅವರು ಸದರಿ ಕಾಮಗಾರಿ ಕುರಿತಂತೆ ರೈತರು ಸಮಾಧಾನ ವ್ಯಕ್ತಪಡಿಸಿದ್ದನ್ನು ಗಮನಿಸಿದ ಆಡಳಿತಾಧಿಕಾರಿಗಳು ಪರಿಶೀಲನಾ ಸಮಯದಲ್ಲಿ ಹಾಜರಿದ್ದ ಪ್ರಾಧಿಕಾರದ ಕೃಷಿ ಅಧಿಕಾರಿಗಳಿಗೆ ಕಾಮಗಾರಿಗಳ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಮತ್ತು ರೈತರ ಬೇಡಿಕೆಯಂತೆ ರೈತರಿಗೆ ಅನುಕೂಲವಾಗುವಂತಹ ಇಂತಹ ಕಾಮಗಾರಿಗಳನ್ನು ಹೆಚ್ಚು ಹೆಚ್ಚಾಗಿ ತೆಗೆದುಕೊಳ್ಳುವಂತೆ ಸೂಚಿಸಿದರು.
ಪ್ರಸ್ತುತ ವರ್ಷ ಮಾರ್ಚ ಅಂತ್ಯದ ವರೆಗೆ ನರಗುಂದ ತಾಲೂಕಿನಲ್ಲಿ ಪ್ರಾಧಿಕಾರದ ವತಿಯಿಂದ ೨೪.೮೨ ಲಕ್ಷ ರೂ.ಗಳ ಅನುದಾನದ ವೆಚ್ಚದಲ್ಲಿ ೮೪೮.೦೦ಹೇಕ್ಟರ್ ಪ್ರದೇಶದ ಸವಳು ಜವಳು ಭೂ ಸುಧಾರಣೆ ಕಾಮಗಾರಿ ಹಾಗೂ ೧೮೫೯೨೯ ರೂ.ಗಳ ಅನುದಾನದ ವೆಚ್ಚದಲ್ಲಿ ೧ ಸಂಖ್ಯೆ ಚೆಕ್ ಡ್ಯಾಂ ಕಾಮಗಾರಿಗಳನ್ನು ಕೈಕೊಳ್ಳುವುದಾಗಿ ಅವರು ತಿಳಿಸಿದರು.
ಪರಿಶೀಲನಾ ಸಮಯದಲ್ಲಿ ನರಗುಂದ ಕಾಡಾ ಕಚೇರಿಯ ಸಹಾಯಕ ಕೃಷಿ ಅಧಿಕಾರಿಗಳು ಹಾಗೂ ಕೃಷಿ ಸಹಾಯಕರು ಉಪಸ್ಥಿತರಿದ್ದರು.